Advertisement

ಲಿಬಿಯಾದಲ್ಲಿ ಮಲಯಾಳಿಯೊಬ್ಬನ ಮೊದಲ ಸಾವು; ಬಹಿರಂಗಪಡಿಸಿದ ಐಸಿಸ್

07:44 PM Aug 21, 2022 | Team Udayavani |

ತಿರುವನಂತಪುರಂ: ಲಿಬಿಯಾದಲ್ಲಿ ಮೊದಲ ಮಾರಣಾಂತಿಕ ದಾಳಿ ನಡೆಸಿ ಸಾವನ್ನಪ್ಪಿದ ಯುವಕ ಭಾರತೀಯ ಮಲಯಾಳಿ ಎಂದು ಐಸಿಸ್ ಮುಖವಾಣಿ ‘ವಾಯ್ಸ್ ಆಫ್ ಖುರಾಸನ್’ ಬಹಿರಂಗಪಡಿಸಿದೆ.

Advertisement

ಐಸಿಸ್‌ಗಾಗಿ ಸಾವನ್ನಪ್ಪಿದ ಮೊದಲ ಭಾರತೀಯ ಎಂಬುದು ಬಹಿರಂಗವಾಗಿದ್ದು, ಕೇರಳದಲ್ಲಿ ಜನಿಸಿದ ಕ್ರಿಶ್ಚಿಯನ್ ಯುವಕನಿಂದ ಈ ದಾಳಿ ನಡೆದಿದೆ. ಗಲ್ಫ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಇಸ್ಲಾಂಗೆ ಮತಾಂತರಗೊಂಡು ನಂತರ ಐಸಿಸ್ ಸೇರಿ ಲಿಬಿಯಾದಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದ.

ವಾಯ್ಸ್ ಆಫ್ ಖುರಾಸಾನ್’ ಆತನ ಹೆಸರನ್ನು ಅಥವಾ ಘಟನೆಯ ವರ್ಷವನ್ನು ಉಲ್ಲೇಖಿಸಿಲ್ಲ. ಆತ ಅಬು ಬಕರ್ ಅಲ್ ಹಿದ್ ಎಂಬ ಹೆಸರಿನಲ್ಲಿ ಐಸಿಸ್ ಜೊತೆ ಕೆಲಸ ಮಾಡುತ್ತಿದ್ದ. ಘಟನೆಯ ಕುರಿತು ಗುಪ್ತಚರ ಸಂಸ್ಥೆಗಳು ತನಿಖೆ ಆರಂಭಿಸಿವೆ. ‘ವಾಯ್ಸ್ ಆಫ್ ಖುರಾಸನ್’ ಅಫ್ಘಾನಿಸ್ತಾನದಿಂದ ಪ್ರಕಟವಾದ ಇಸ್ಲಾಮಿಕ್ ಸ್ಟೇಟ್ ಮುಖವಾಣಿಯಾಗಿದೆ.

ಐಸಿಸ್ ಈ ಹಿಂದೆ ಸಿರಿಯಾದಿಂದ ಪ್ರಕಟವಾದ ಮುಖವಾಣಿಯಲ್ಲಿ ಇದೇ ರೀತಿಯ ಮಾಹಿತಿಯನ್ನು ನೀಡಿತ್ತು. ನಂತರ ಗುಪ್ತಚರ ಸಂಸ್ಥೆಗಳಾದ ಆರ್‌ಒ, ಎನ್‌ಐಎ ಮತ್ತು ಐಬಿ ತನಿಖೆ ನಡೆಸಿದರೂ ವ್ಯಕ್ತಿ ಪತ್ತೆಯಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next