ಹೈದರಾಬಾದ್: ಐದನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿಗೆ ಸೋಮವಾರ ಮೊದಲ ವಿರಾಮ. ಈವರೆಗೆ ಹೈದರಾಬಾದ್‌ನಲ್ಲಿ 6 ಪಂದ್ಯ ಗಳನ್ನಾಡಲಾಗಿದ್ದು, ಆತಿಥೇಯ ತೆಲುಗುಟೈಟಾನ್ಸ್ ಮೂರರಲ್ಲಿ ಒಂದು ಪಂದ್ಯ ವನ್ನಷ್ಟೇ ಗೆದ್ದಿದೆ. ಅದು ಕೂಟದ ಉದ್ಘಾ ಟನಾ ಪಂದ್ಯವಾಗಿತ್ತು. ನೂತನ ತಂಡ ವಾದ ತಮಿಳ್ ತಲೈವಾಸ್ ವಿರುದ್ಧ 32-27 ಅಂತರದ ಜಯ ಸಾಧಿಸಿತ್ತು.
ಆದರೆ ಅನಂತರದ ಎರಡೂ ಪಂದ್ಯ ಗಳಲ್ಲಿ ಮುಗ್ಗರಿಸಿತು. ಪಾಟ್ನಾ ಪೈರೇಟ್ಸ್ ಕೈಯಲ್ಲಿ 35-29ರಿಂದ ಪರಾಭವಗೊಂಡ ಟೈಟಾನ್ಸ್, ಸೋಮವಾರ ರಾತ್ರಿ ಬೆಂಗಳೂರಿಗೆ 31-21 ಅಂತರದಿಂದ ಶರಣಾಯಿತು.
ತಮಿಳ್ ತಲೈವಾಸ್‌ನಂತೆಯೇ ಸೋಲಿನ ಆರಂಭ ಕಂಡುಕೊಂಡ ತಂಡ ಗಳೆಂದರೆ ಯು ಮುಂಬಾ, ಜೈಪುರ್ ಪಿಂಕ್ ಪ್ಯಾಂಥರ್ ಮತ್ತು ಹರ್ಯಾಣ ಸ್ಟೀಲರ್. ಆದರೆ ಯು ಮುಂಬಾ ತನ್ನ ದ್ವಿತೀಯ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದೆ. ಮುಂಬಾ ವಿರುದ್ಧ ಪರಾಭವಗೊಂಡ ತಂಡ ಹರ್ಯಾಣ ಸ್ಟೀಲರ್. ಅಂತರ ಕೇವಲ ಒಂದು ಅಂಕ!
ಗೆಲುವಿನ ಆರಂಭ ಕಂಡುಕೊಂಡ ತಂಡ ಗಳೆಂದರೆ ಪುನೇರಿ ಪಲ್ಟಾನ್ಸ್, ಡೆಲ್ಲಿ ದಬಾಂಗ್, ಬೆಂಗಳೂರು ಬುಲ್ಸ್. ಮಂಗಳವಾರ ಮತ್ತೂಂದು ನೂತನ ತಂಡ ಗುಜರಾತ್ ಫಾರ್ಚೂನ್ಸ್ ತನ್ನ ಅದೃಷ್ಟ ಹುಡುಕಿಕೊಂಡು ಹೊರಡಲಿದೆ. ಎದುರಾಳಿ ಡೆಲ್ಲಿ ದಬಾಂಗ್. ದ್ವಿತೀಯ ಮುಖಾಮುಖೀಯಲ್ಲಿ ತೆಲುಗು ಟೈಟಾನ್ಸ್-ಯುಪಿ ಯೋಧಾಸ್ ಎದುರಾಗಲಿವೆ. ಯೋಧಾಸ್ ಕೂಡ ನೂತನ ತಂಡವಾಗಿದ್ದು, ಎಂಥ ಪ್ರದ ರ್ಶನ ನೀಡೀತೆಂಬ ಕುತೂಹಲ ಕಬಡ್ಡಿ ಪ್ರಿಯರದ್ದು.