ನಾವು ಸದಾ ಪುಸ್ತಕದ ಮಧ್ಯೆ ಉಳಿದು ಹೋಗಿ ಅದರ ಆಚೆ ಏನಿದೆ ಅಂತ ನೋಡೋಕೂ ಹೋಗ್ಲಿಲ್ಲ. ಮಾರ್ಕ್ಸ್ನ ಆಚೆ ಇರುವ ಬದುಕಿನ ಗೆರೆಗಳು ನಮಗೆ ಕಾಣಿಸಲೇ ಇಲ್ಲ. ಲಾಸ್ಟ್ ಬೆಂಚ್ ಬಾಯ್ಸ ಬಾಳಿನ ಸಣ್ಣ ಸಣ್ಣ ಅವಕಾಶಗಳನ್ನು ಬಿಡದಂತೆ ಹಿಡಿದು ಪಳಗಿಸಿಕೊಂಡು ಖುಷಿ ಪಟ್ಟರು. ಮುಲಾಜನ್ನು ಮೂಲೆಗಿಟ್ಟು ಲೈಫ್ನ ಎಂಜಾಯ್ ಮಾಡಿದ್ರು.
ದಪ್ಪನೆಯ ಸೋಡಾಗ್ಲಾಸ್ ಕಣ್ಣಿಗೆ, ಬಿಗಿಯಾದ ಟೈ ಕೊರಳಿಗೆ, ಗಿರ ಗಿರ ತಿರುಗುವ ಫ್ಯಾನ್‌ಗಳ ಕೆಳಗೆ ದಿನಪೂರ್ತಿ ಕೆಲಸ. ತಿಂಗಳ ಕೊನೆಗೆ ಒಂದಿಷ್ಟು ಹಣ. ಹೋಗಲಿ ಬಿಡಿ ಅದೆಲ್ಲ ಯಾಕೆ! ಹೆಂಡತಿ ಕಾಟಕ್ಕೆ ಸೈಟ್ ಅಂತ ಒಂದು ತಗೊಂಡು, ಮನೆ ಕಟ್ಟೋಕೆ ರೆಡಿಯಾದ ನನಗೆ ಕಾರ್ಪೊàರೇಷನ್‌ನಿಂದ ತಕರಾರು ಬಂದಿತ್ತು. ಕಾರ್ಪೊàರೇಷನ್ ಅಧ್ಯಕ್ಷರನ್ನು ಕಂಡು ಮಾತಾಡಿಸಿಯೇ ಬರೋಣ, ಏನಾದರೂ ರಿಕ್ವೆಸ್ಟ್ ಮಾಡೋಣ ಅಂತ ಹೋದಾಗ ಆಗಿದ್ದು ನನಗೆ ನಿಜಕ್ಕೂ ಶಾಕ್ ಆಯ್ತು! ಅಲ್ಲಿ ಕಾರ್ಪೊರೇಷನ್ ಅಧ್ಯಕ್ಷರ ಸೀಟಿನಲ್ಲಿ ಇದ್ದವ, ಪಿಯುಸಿಯಲ್ಲಿ ಲಾಸ್ಟ್ ಬೆಂಚಿನಲ್ಲಿ ಕೂರುತ್ತಿದ್ದ ನನ್ನ ಕ್ಲಾಸ್‌ಮೇಟ್ ರವಿ. ಇವನು ಇಲ್ಲಿ!? ನನಗೆ ತಲೆ ತಿರುಗುವುದೊಂದೇ ಒಂದೇ ಬಾಕಿ. “ಹೇ ರವಿ, ನೀನು ಇಲ್ಲಿ!?’ ಅಂದೆ. ಅವನು ನನ್ನನ್ನು ಮರೆತಿರಲಿಲ್ಲ. ಆತ್ಮೀಯವಾಗಿ ಕೂರಿಸಿಕೊಂಡು ಮಾತಾಡಿದ. ಕಾಫಿ ತರಿಸಿದ. ಇಬ್ಬರೂ ಕುಡಿದೆವು. ಸಮಸ್ಯೆ ಹೇಳಿಕೊಂಡೆ, ಪರಿಹಾರ ಅವನೇ ತಿಳಿಸಿದ.
ಆದರೆ ನನ್ನ ವಿಷ್ಯ ಅದಲ್ಲ. ರವಿಯದು. ಶಾಲೆ- ಕಾಲೇಜಿನಲ್ಲಿದ್ದಾಗ ರವಿ ತುಂಬಾ ತಲೆ ಹರಟೆ ಹುಡುಗ. ಎಷ್ಟೋ ಬಾರಿ ನನಗೆ ಧಮಕಿ ಹಾಕಿದವ. “ನೋಡೂ, ಅನ್ನಪೂರ್ಣನ ಮಾತಾಡಿಸಿದರೆ ಸರಿ ಇರಾಕಿಲ್ಲ, ಫಸ್ಟ್ ಬೆಂಚಲ್ಲಿ ಕೂತಿದೀಯ, ಪಸ್ಟ್ ಕ್ಲಾಸ್ ಆಗಿ ಸುಮ್ಮನೆ ಓದು. ಅವಳು ನನ್ನ ಹುಡುಗಿ’ ಅಂದಿದ್ದ. “ನಾನು ಮಾತಾಡಿಸಲ್ಲ. ಆದರೆ ಅವಳೇ…’ ಅಂತ ಉಸಿರು ಬಿಟ್ಟಾಗ “ಅವೆಲ್ಲಾ ಗೊತ್ತಿಲ್ಲ. ನಾಳೆಯಿಂದ ಕಾಲೇಜಿಗೆ ಬರಿ¤àಯೋ ಇಲ್ವೋ ಡಿಸೈಡ್ ಮಾಡು’ ಅಂದಿದ್ದ. ಒರಟ ಅಂದ್ರೆ ಒರಟ.
ಆದರೆ ನಾವು ತುಂಬಾ ಧಿಮಾಕಿನವರು. 90 ಮಾರ್ಕ್ಸ್ ತಗೆಯುವವರು. ಮೊದಲ ಬೆಂಚಿನವರು. ಈ ಕಾರಣಗಳಿಗೇ ಲೆಕ್ಚರ್, ಹುಡುಗಿಯರು ನಮೊjತೆ ಮಾತಾಡೋವಷ್ಟು ಲಾಸ್ಟ್‌ಬೆಂಚಿನವರೊಂದಿಗೆ ಮಾತಾಡುತ್ತಿರಲಿಲ್ಲ. ನಾವು ಸದಾ ಬುಕ್ಸ್ ಜೊತೆ. “ತರಗತಿ- ಲೈಬ್ರರಿ- ಮನೆ’ ಇಷ್ಟೇ ನಮ್ಮ ಜೀವನ. ಆದರೆ ರವಿ, ಈಶ, ಸೀನ ಇವರೆಲ್ಲಾ ಲಾಸ್ಟ್ ಬೆಂಚಿನ ಹುಡುಗರು. ಅಧ್ಯಾಪಕರಿಂದ ತಾತ್ಸಾರಕ್ಕೆ ಗುರಿಯಾದವರು. ಈಗ ಅನಿಸುತ್ತಿದೆ. ನಿಜಕ್ಕೂ ಲೈಫ್ ಅಂದ್ರೆ ಇವರೆªà ಇರಬೇಕು ಅಂತ. ಬಡ್ಡಿಮಕ್ಳು ಅದೆಷ್ಟು ಎಂಜಾಯ್ ಮಾಡಿದ್ರಪ್ಪ! ಕಾಲೇಜಿಗೆ ಬರಿ¤ದ್ರು ಮಿಸ್ ಮಾಡದೇ. ಆದರೆ ತರಗತಿಗೆ ಬಂದಿದ್ದು ಕಾಣೆ. ಸದಾ ಕಿರಿಕ್ ಪಾರ್ಟಿಗಳು. ಹುಡುಗೀರನ್ನ ರೇಗಿಸೋದು, ಲೆಕ್ಚರ್‌ನ ಕಿಚಾಯಿಸೋದು, ಫಸ್ಟ್ ಬೆಂಚ್ ಹುಡುಗರನ್ನ ಗೋಳು ಹುಯೊRಳ್ಳೋದು, ಸಿನೆಮಾ, ಟ್ರಿಪ್, ಟ್ರೆಕ್ಕಿಂಗ್, ಡೇಟಿಂಗ್, ಕಾಲೇಜು ಚುನಾವಣೆ ಅಂತ ಸದಾ ಬ್ಯುಸಿ ಇರೋರು. ನಾವು ಕೂಡ ಬ್ಯುಸಿನೇ… ಆದರೆ ಪುಸ್ತಕಗಳ ಮಧ್ಯೆ!
ನನಗಂತೂ ಆ ದಿನಗಳಲ್ಲಿ ಕೆಲಸ ಹಿಡಿಯುವುದೊಂದೇ ಗುರಿಯಾಗಿತ್ತು. ಅದಕ್ಕೇ ಸೋಡಾಬುಡ್ಡಿ ಕನ್ನಡಕ ಹಾಕಿಕೊಂಡು ಓದಿದೆ. ಈಗ ಅದೇ ಸೋಡಾಬುಡ್ಡಿ ಹಾಕಿಕೊಂಡು ತಿಂಗಳ ಸಂಬಳಕ್ಕೆ ಕಾಯುತ್ತಿದ್ದೇನೆ. ಆದರೆ ರವಿ. ಈಶ, ಸೀನ ಇಂದು ಅದ್ಯಾವ ಪರಿ ಬೆಳೆದು ನಿಂತಿದ್ದಾರೆ ಅಂದರೆ ನನಗೇ ಆಶ್ಚರ್ಯವಾಯಿತು. ಪಿ.ಯು.ಸಿ.ಯಲ್ಲಿ ಮೂರು ಸರಿ ದಂಡಯಾತ್ರೆ ಮುಗಿಸಿ, ಹೇಗೋ ಡಿಗ್ರಿಗೆ ಸೇರಿಕೊಂಡು ಅಲ್ಲೂ ಕಿರಿಕ್ ಮಾಡಿಕೊಂಡು ಡಿಗ್ರಿ ಕಂಪ್ಲೀಟ್ ಮಾಡಿಕೊಳ್ಳದೇ ಓತ್ಲಾ ಹೊಡೆಯುತ್ತಿದ್ದರು. ಆಮೇಲೆ ನೋಡಿದರೆ ಅವರವರ ಅಭಿರುಚಿಯ ದಾರಿಯನ್ನು ಅವರೇ ಹುಡುಕಿಕೊಂಡು ಹೋಗಿ ಇಂದು ಒಳ್ಳೊಳ್ಳೆ ಸ್ಥಾನದಲ್ಲಿ ಕೂತಿದ್ದಾರೆ. ಈಶ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಅಂತೆ, “ಲೆಕ್ಕ ಹಾಕೋಕೆ ಸಾಧ್ಯವಾಗದಷ್ಟು ದುಡ್ಡು ಮಾಡಿದ್ದಾನೆ’ ಅಂದ ರವಿ. ಸೀನ ಊರಲ್ಲಿ ಜಮೀನಲ್ಲಿ ಒಳ್ಳೆ ಬೆಳೆ ಬೆಳೆಯುತ್ತಿದ್ದಾನಂತೆ. ಗಂಡ ಹೆಂಡತಿ, ಮಕ್ಕಳು ಒಳ್ಳೆ ಸಂಸಾರ ಅವಂದು ಅಂದ. ನನ್ನ ಬಗ್ಗೆ ಕೇಳಿದ. ನನ್ನ ಬಗ್ಗೆ ಹೇಳಿಕೊಳ್ಳೋಕೆ ತುಸು ನಾಚಿಕೆಯೇ ಆಯಿತು.
ಒಂದು ವಿಷಯವಂತೂ ನಂಗೆ ಕನ್ಪರ್ಮ್ ಆಯಿತು. ಬೆಂಚ್ ಯಾವುದು? ಮಾರ್ಕ್‌ಗಳು ಎಷ್ಟು? ಎಂಬುದು ಯಾವತ್ತೂ ಕೂಡ ಮುಖ್ಯವಾಗುವುದಿಲ್ಲ. ಮೊದಲ ಬೆಂಚಿನವರು ಎಂಬ ಧಿಮಾಕು ಕರಗಿ ಹೋಯಿತು. ಅವರು ಕಿರಿಕ್ ಪಾರ್ಟಿಯವರು ಎಂಬ ಕಲ್ಪನೆ ಮೆಲ್ಲನೆ ಇಳಿದು ಹೋಯಿತು. ನಿಜಕ್ಕೂ ಅವರೇ ಸರಿ ಅನಿಸಿತು. ನಾವು ಸದಾ ಪುಸ್ತಕದ ಮಧ್ಯೆ ಉಳಿದು ಹೋಗಿ ಅದರ ಆಚೆ ಏನಿದೆ ಅಂತ ನೋಡೋಕೂ ಹೋಗ್ಲಿಲ್ಲ. ಮಾರ್ಕ್ಸ್ನ ಆಚೆ ಇರುವ ಬದುಕಿನ ಗೆರೆಗಳು ನಮಗೆ ಕಾಣಿಸಲೇ ಇಲ್ಲ. ಲಾಸ್ಟ್ ಬೆಂಚ್ ಬಾಯ್ಸ ಬಾಳಿನ ಸಣ್ಣ ಸಣ್ಣ ಅವಕಾಶಗಳನ್ನು ಬಿಡದಂತೆ ಹಿಡಿದು ಪಳಗಿಸಿಕೊಂಡು ಖುಷಿ ಪಟ್ಟರು. ಮುಲಾಜನ್ನು ಮೂಲೆಗಿಟ್ಟು ಲೈಫ್ನ ಎಂಜಾಯ್ ಮಾಡಿದ್ರು.
ತಮ್ಮ ಬದುಕಿನ ದಾರಿ ಯಾವುದು ಅಂತ ತಮ್ಮ ಬದುಕಿನ ಅನುಭವದಲ್ಲಿಯೇ ಕಂಡುಕೊಂಡ್ರು. ಹಾಗೆಯೇ ಆ ನಿಟ್ಟಿನಲ್ಲಿ ಸಾಗಿ ಇಂದು ನೆಮ್ಮದಿಯನ್ನ ಹುಡುಕಿಕೊಂಡಿದ್ದಾರೆ. ಮೊದಲ ಬೆಂಚಿನವರಿಗಿಂತ ಹೆಚ್ಚು ಹಣ, ಹೆಸರು ಮಾಡಿದ್ದಾರೆ. ಆದರೆ ಹೋಲ್ ಸೇಲ್ ಆಗಿ ಮೊದಲ ಬೆಂಚಿನವರು ವೇಸ್ಟ್, ಲಾಸ್ಟ್ ಬೆಂಚಿನವರು ಬೆಸ್ಟ್ ಅಂತ ನಾನು ಹೇಳುತ್ತಿಲ್ಲ. ಆದರೆ ಲಾಸ್ಟ್ ಬೆಂಚ್ ಮತ್ತು ಫಸ್ಟ್ ಬೆಂಚ್ ಎಂಬ ತಾರತಮ್ಯ ಸಲ್ಲದು ಎನ್ನುವುದಷ್ಟೇ ನನ್ನ ಅಭಿಪ್ರಾಯ.
– ಸದಾಶಿವ್ ಸೊರಟೂರು, ಶಿಕ್ಷಕರು