Advertisement

ಭ್ರೂಣ ಕಸಿಯಿಂದ ಮಗು

06:00 AM Dec 06, 2018 | |

ಸಾವೋ ಪಾವ್ಲೋ: ವಿಶ್ವದಲ್ಲೇ  ಮೊದಲ ಬಾರಿಗೆ ಕಸಿ ಮಾಡಿದ ಭ್ರೂಣದಿಂದ ಬ್ರೆಜಿಲ್‌ನಲ್ಲಿ ಯಶಸ್ವಿಯಾಗಿ ಮಗು ಪಡೆಯಲಾಗಿದೆ. ದಿ ಲಾನ್ಸೆಟ್‌ ಮೆಡಿಕಲ್‌ ಜರ್ನಲ್‌ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದ್ದು, ದಾನಿಯಿಂದ ಪಡೆದ ಭ್ರೂಣವನ್ನು ಮಹಿಳೆಗೆ ಕಸಿ ಮಾಡಲಾಗಿತ್ತು. ಈ ಹಿಂದೆ ಅಮೆರಿಕ, ಝೆಕ್‌ ಗಣರಾಜ್ಯ ಹಾಗೂ ಟರ್ಕಿ ಸೇರಿದಂತೆ ವಿವಿಧ ದೇಶಗಳಲ್ಲಿ 10 ಬಾರಿ ಈ ರೀತಿಯ ಪ್ರಯೋಗ ಮಾಡಲಾಗಿತ್ತಾದರೂ, ವಿಫ‌ಲವಾಗಿತ್ತು. ಆದರೆ, ಬ್ರೆಜಿಲ್‌ನಲ್ಲಿ ನಡೆಸಿದ ಈ ಪ್ರಯೋಗ ಯಶಸ್ವಿಯಾಗಿದೆ. 35 ವಾರಗಳಲ್ಲಿ ಮಹಿಳೆಗೆ ಸಿಸೇರಿಯನ್‌ ಮೂಲಕ ಪ್ರಸವವಾಗಿದೆ. ಮಗು 2.5 ಕಿಲೋ ತೂಕವಿದ್ದು, ಆರೋಗ್ಯವಾಗಿದೆ.

Advertisement

ಬ್ರೆಜಿಲ್‌ನ ಸಾವೋ ಪಾವ್ಲೋ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಈ ಪ್ರಯೋಗ ನಡೆಸಲಾಗಿದೆ. ಮೃತ ಮಹಿಳೆಯಿಂದ ಈ ಭ್ರೂಣ ವನ್ನು ಪಡೆಯಲಾಗಿದ್ದು, ಜೀವಂತ ವ್ಯಕ್ತಿ ಗಳಿಗಿಂತ ಹೆಚ್ಚಾಗಿ ಮೃತರಿಂದಲೇ ಇಂತಹ ದಾನ ಹೆಚ್ಚು ನಡೆಯುತ್ತದೆ ಎಂದು ಸಾವೋ ಪಾವ್ಲೋ ವಿವಿ ವೈದ್ಯೆ ಡ್ಯಾನಿ ಎಜೆನ್‌ಬಗ್‌ ಹೇಳಿದ್ದಾರೆ. ಬಂಜೆತನ ಇರುವ ಮಹಿಳೆ ಯರಿಗೆ ಈ ವರೆಗೆ ದತ್ತು ಸ್ವೀಕಾರ ಅಥವಾ ಬಾಡಿಗೆ ತಾಯ್ತನ ಆಯ್ಕೆ ಮಾತ್ರವೇ ಇತ್ತು. ಇನ್ನು ಭ್ರೂಣ ಕಸಿಯಿಂದಲೂ ಈ ಮಗು ವನ್ನು ಪಡೆಯುವ ಸಾಧ್ಯತೆ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next