Advertisement

TTE ರಿಂದಲೂ ರೈಲಲ್ಲಿನ್ನು ಪ್ರಥಮ ಚಿಕಿತ್ಸೆ!

12:35 AM Aug 11, 2024 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ರೈಲಿನಲ್ಲಿ ಟಿಕೆಟ್‌ ಪರೀಕ್ಷಕರು (ಟಿಟಿಇ) ಟಿಕೆಟ್‌ ತಪಾಸಣೆ ಜತೆಗೆ ಪ್ರಯಾಣಿಕರಿಗೆ ಅಗತ್ಯ ಬಿದ್ದರೆ ಪ್ರಥಮ ಚಿಕಿತ್ಸೆಯನ್ನೂ ನೀಡಲಿದ್ದಾರೆ.

Advertisement

ಉತ್ತರ ಮತ್ತು ಉತ್ತರ ಕೇಂದ್ರ ರೈಲ್ವೇ ವಲಯಗಳಲ್ಲಿ ಶೀಘ್ರವೇ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಈ 2 ವಲಯಗಳ ವ್ಯಾಪ್ತಿಯಲ್ಲಿರುವ ಟಿಟಿಇಗಳಿಗೆ ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ನೀಡಲಾಗುತ್ತದೆ. ಅದರಲ್ಲಿ ಸಾಮಾನ್ಯ ಮತ್ತು ಕೆಲವು ಜೀವರಕ್ಷಕ ಔಷಧ, ಮಾತ್ರೆ, ಇಂಜೆಕ್ಷನ್‌ ಇರಲಿವೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

ಕೆಲವು ಸಂದರ್ಭಗಳಲ್ಲಿ ಮಕ್ಕಳಿಗೆ ಶೀತ, ಜ್ವರ, ವಿಪರೀತ ಹೊಟ್ಟೆ ನೋವು, ವಾಂತಿ, ಸುಸ್ತು ಮತ್ತಿತರ ಸಮಸ್ಯೆಕಂಡು ಬಂದಾಗ ಪ್ರಥಮ ಚಿಕಿತ್ಸೆ ನೀಡಲು ರೈಲಲ್ಲಿ ವ್ಯವಸ್ಥೆಯಿರುವುದಿಲ್ಲ. ರೈಲು ನಿಲ್ದಾಣಗಳಲ್ಲಿನ ಆಸ್ಪತ್ರೆಗೆ ದಾಖಲಿಸ ಬೇಕೆಂದರೂ ಕೆಲವೊಮ್ಮೆ ಸಿಗ್ನಲ್‌ಗ‌ಳಲ್ಲಿ ಏಕಾಏಕಿ ರೈಲು ನಿಲ್ಲಿಸಬೇಕಾಗುತ್ತದೆ. ಇದರಿಂದ ಸಾಕಷ್ಟು ತೊಂದರೆ ಉಂಟಾ ಗುತ್ತದೆ. ಸದ್ಯ ಟಿಟಿಇಗಳು ರೈಲು ನಿಲ್ದಾಣಗಳಿಗೆ ಮಾಹಿತಿ ನೀಡಿ ಅಲ್ಲಿ ವೈದ್ಯಕೀಯ ವ್ಯವಸ್ಥೆ ಮಾಡುತ್ತಾರೆ. ಮೆಡಿಕಲ್‌ ಕಿಟ್‌ ಟಿಟಿಇ ಬಳಿ ಇದ್ದರೆ, ತಾತ್ಕಾಲಿಕ ಪರಿಹಾರ ಸಾಧ್ಯ ಎಂದು ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next