Advertisement

ವರ್ಷದಲ್ಲೇ ಭಾರತದ ಮೊದಲ 3ಡಿ ಪ್ರಿಂಟೆಡ್‌ ನಿರ್ಮಾಣ?

11:17 AM Nov 07, 2018 | |

ಚೆನ್ನೈ: ಇನ್ನು ಒಂದೇ ವರ್ಷದಲ್ಲಿ ಭಾರತವು ಮೊದಲ 3ಡಿ ಪ್ರಿಂಟೆಡ್‌ ಮನೆಯನ್ನು ಹೊಂದಿದರೆ ಅಚ್ಚರಿಯಿಲ್ಲ! ತಮಿಳುನಾಡಿನಲ್ಲಿರುವ ಐಐಟಿ ಮದ್ರಾಸ್‌ನ ಸಂಶೋಧಕರ ತಂಡವೊಂದು ಕೇವಲ 2 ದಿನಗಳಲ್ಲಿ ಒಂದು ಮಹಡಿಯುಳ್ಳ ಮಿನಿ 3ಡಿ ಪ್ರಿಂಟೆಡ್‌ ಮನೆಯೊಂದನ್ನು ನಿರ್ಮಿಸಿದೆ.

Advertisement

 ದೇಶೀಯವಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನದ ಮೂಲಕ ಈ ಮನೆ ನಿರ್ಮಿಸಲಾಗಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಾಂಕ್ರೀಟ್‌ ಅನ್ನೂ ಇದಕ್ಕೆ ಬಳಸಲಾಗಿದೆ.

ಈ ಮೂಲಕ ದೇಶದಲ್ಲಿ ಅಗ್ಗದ ಗೃಹ ನಿರ್ಮಾಣಕ್ಕೆ ಅಡಿಪಾಯ ಹಾಕಬಹುದಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next