Advertisement

US: ಅಮೆರಿಕ ರೆಸ್ಟಾರೆಂಟ್‌ನಲ್ಲಿ ಫೈರಿಂಗ್‌- 22 ಮಂದಿ ಸಾವು

08:44 PM Oct 26, 2023 | Team Udayavani |

ವಾಷಿಂಗ್ಟನ್‌:ಅಮೆರಿಕದ ಮೈನೆನ್‌ ಪ್ರಾಂತ್ಯದ ಲೆವಿಸ್ಟನ್‌ನಲ್ಲಿ ಶಸ್ತ್ರಧಾರಿ ರೆಸ್ಟೋರೆಂಟ್‌ ಮೇಲೆ ಬುಧವಾರ ಗುಂಡಿನದಾಳಿ ನಡೆಸಿ, 22 ಮಂದಿಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆಯಲ್ಲಿ 50ರಿಂ0 60 ಮಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಗುಂಡು ಹಾರಿಸಿ 22 ಮಂದಿಯನ್ನು ಕೊಂದ ಘಟನೆಗೆ ಕಾರಣನಾದ ವ್ಯಕ್ತಿಯನ್ನು ರಾಬರ್ಟ್‌ ಕಾರ್ಡ್‌ ಎಂದು ಪೊಲೀಸರು ಗುರುತಿಸಿ, ಬಂಧಿಸಿದ್ದಾರೆ. ಅದಕ್ಕಾಗಿ ಅವರು ಬಿರುಸಿನ ಕಾರ್ಯಾಚರಣೆ ನಡೆಸಿದ್ದರು.

ಬಂಧಿತ ವ್ಯಕ್ತಿ ಸೇನೆಯಲ್ಲಿ ಬಂದೂಕು ತರಬೇತುದಾರನಾಗಿದ್ದಾನೆಂದು ಗುರುತಿಸಲಾಗಿದೆ. ಮಾನಸಿಕ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ 2 ವಾರಗಳ ಆತ ಆಸ್ಪತ್ರೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದಿದ್ದ. ಈ ವೇಳೆ ಪದೇ ಪದೆ ದಾಳಿಗೆ ಪ್ರೇರೇಪಿಸುವಂಥ ಧ್ವನಿಗಳು ಆತನಿಗೆ ಕೇಳುತ್ತಿರುವುದಾಗಿ ಹೇಳಿಕೊಂಡಿದ್ದನೆಂಬ ವರದಿಯೂ ಇದೆ. ಹೀಗಾಗಿ, ಈ ಕೃತ್ಯಕ್ಕೆ ಆತನೇ ಕಾರಣನೆಂಬ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next