Advertisement

Salman Khan ನಿವಾಸಕ್ಕೆ ಫೈರಿಂಗ್‌: ಶಂಕಿತ ಇಬ್ಬರ ಬಂಧನ

01:32 AM Apr 16, 2024 | Team Udayavani |

ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ರವಿವಾರ ನಡೆದ ಗುಂಡಿನದಾಳಿಗೆ ಅಮೆರಿಕದಲ್ಲೇ ಪಿತೂರಿ ರೂಪಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ ಸಹವರ್ತಿ ರೋಹಿತ್‌ ಗೊಡಾರಾ ಅಮೆರಿಕದಲ್ಲಿದ್ದುಕೊಂಡೇ ಕೃತ್ಯ ಎಸಗಲು ಹರಿಯಾಣದ ಗುರು ಗ್ರಾಮದ ಇಬ್ಬರು ವ್ಯಕ್ತಿಗಳನ್ನು ನೇಮಿ ಸಿದ್ದ. ಕೃತ್ಯ ಎಸಗಿದ ಇಬ್ಬರೂ ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಸೋಮವಾರ ತಿಳಿಸಿವೆ.

Advertisement

ಪ್ರಕರಣದ ಬಗ್ಗೆ ಮುಂಬಯಿ ಕ್ರೈಂ ಬ್ರ್ಯಾಂಚ್‌ ಪೊಲೀಸರು ತನಿಖೆ ನಡೆಸು ತ್ತಿದ್ದು, ಕೃತ್ಯ ಎಸಗಿದ ಶಂಕಿತರನ್ನು ಮುಂಬ ಯಿಯಲ್ಲಿ ಬಂಧಿಸಲಾಗಿದ್ದು, ಈ ಇಬ್ಬರೂ ಹರಿಯಾಣದವರಾಗಿದ್ದು ಕೃತ್ಯ ಎಸಗುವುದಕ್ಕಾಗಿ ರೋಹಿತ್‌ ಇವರನ್ನು ನಿಯೋಜಿಸಿದ್ದ ಎನ್ನಲಾಗಿದೆ. ಸಂಚಾನ್‌ ಮುಂಜಾಲ್‌ ಎಂಬ ಉದ್ಯಮಿಯ ಹತ್ಯೆಯಲ್ಲೂ ರೋಹಿತ್‌ ಕೈವಾಡವಿದೆ.

Advertisement

Udayavani is now on Telegram. Click here to join our channel and stay updated with the latest news.

Next