ಸಿಡ್ನಿ: ದೇಶದೆಲ್ಲೆಡೆ ಹೊಸವರ್ಷದ ಸ್ವಾಗತಕ್ಕೆ ಸಿದ್ಧತೆಗಳು ಭರ್ಜರಿಯಾಗಿ ಸಾಗಿರುವಂತೆಯೇ ಅತ್ತ ಆಸ್ಟ್ರೇಲಿಯಾ ರಾಜಧಾನಿ ಸಿಡ್ನಿ ಹೊಸವರ್ಷ 2020ನ್ನು ಭರ್ಜರಿಯಾಗಿ ಸ್ವಾಗತಿಸಿದೆ.
ಡಿಸೆಂಬರ್ 30ರ ಮಧ್ಯರಾತ್ರಿ 12 ಗಂಟೆ ದಾಟುತ್ತಿದ್ದಂತೆ ಹೊಸ ವರ್ಷದ ಆಗಮನದ ಸೂಚಕವಾಗಿ ಸಿಡ್ನಿ ಹಾರ್ಬರ್ ಸೇತುವೆ ಮೇಲೆ ಚಿತ್ತಾಕರ್ಷಕ ಸುಡುಮದ್ದುಗಳು ಬಾನಂಗಳಕ್ಕೆ ಚಿಮ್ಮಿ ಬೆಳಕಿನ ಚಿತ್ತಾರವನ್ನು ಮೂಡಿಸಿದವು. ಒಂದು ಲಕ್ಷಕ್ಕೂ ಅಧಿಕ ಸುಡುಮದ್ದುಗಳನ್ನು ಈ ಸಂದರ್ಭದಲ್ಲಿ ಸೇತುವೆ ಮೇಲಿಂದ ಸಿಡಿಸಲಾಯಿತು.
ವಿಶ್ವದಲ್ಲೇ ಮೊದಲಿಗೆ ಹೊಸ ವರ್ಷವನ್ನು ಸ್ವಾಗತಿಸುವ ಅವಕಾಶ ಲಭಿಸುವುದು ಪೆಸಿಫಿಕ್ ದ್ವೀಪರಾಷ್ಟ್ರಗಳಾಗಿರುವಂತಹ ಟೊಂಗಾ, ಸಮೋವಾ ಮತ್ತು ಕಿರಿಬಾಟಿಗಳಲ್ಲಿ. ಆ ಬಳಿಕ ಹೊಸ ರಾಷ್ಟ್ರವನ್ನು ಸ್ವಾಗತಿಸುವ ರಾಷ್ಟ್ರ ನ್ಯೂಝಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ.
ಆ ಬಳಿಕ ವಿಶ್ವದ ನಾನಾ ಕಡೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಗರಿಗೆದರಿಕೊಳ್ಳುತ್ತದೆ. ಯು.ಎಸ್.ಎ.ಯ ಬೇಕರ್ ದ್ವೀಪವಾಸಿಗಳು ಕೊನೆಯದಾಗಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ.