Advertisement
“ಪಟಾಕಿಗಳಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗದು. ಅದರ ಬದಲಿಗೆ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿ. ಜತೆಗೆ, ನಿಷೇಧಿತ ಪಟಾಕಿಗಳು ಮತ್ತು ಅದಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ರಾಜ್ಯಕ್ಕೆ ತರದಂತೆ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಪ.ಬಂಗಾಲ ಸರ್ಕಾರಕ್ಕೆ ಸೂಚಿಸಿದೆ.
ದೀಪಾವಳಿಗೆ ತಮಿಳುನಾಡಿನಲ್ಲೂ ಕೇವಲ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ ಕಲ್ಪಿಸಿ ಡಿಎಂಕೆ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ಜತೆಗೆ, ಸುಪ್ರೀಂ ನಿರ್ದೇಶನದ ಅನ್ವಯ, ಬೆಳಗ್ಗೆ 6ರಿಂದ 7 ಮತ್ತು ಸಂಜೆ 7ರಿಂದ 8 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬಹುದು ಎಂದೂ ಹೇಳಿದೆ.