Advertisement

ಗ್ರಾಮ ಪಂಚಾಯತಿ ಚುನಾವಣೆ ಸಿಟ್ಟಿನಿಂದ ಜಾನುವಾರುಗಳ ಸಜೀವ ದಹನ ಮಾಡಿದ ದುಷ್ಕರ್ಮಿಗಳು!

12:42 PM Jan 02, 2021 | Team Udayavani |

ಚಿಕ್ಕಮಗಳೂರು: ಗ್ರಾಮ ಪಂಚಾಯತಿ ಚುನಾವಣೆಯ ಸಿಟ್ಟಿನಿಂದ ಜಾನುವಾರುಗಳ ಸಜೀವ ದಹನಗೈದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Advertisement

ಜಿಲ್ಲೆಯ ಅಜ್ಜಂಪುರ ತಾಲೂಕಿನ ಜಾವೂರು ಹೊಸಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಚಂದ್ರಪ್ಪ ಎನ್ನುವವರಿಗೆ ಸೇರಿದ ದನದ ಕೊಟ್ಟಿಗೆಗೆ ಬೆಂಕಿ ಹಾಕಿ ಹಸುಗಳನ್ನು ಸಜೀವವಾಗಿ ಸುಟ್ಟು ಹಾಕಲಾಗಿದೆ.

ಬೆಂಕಿಯ ಜ್ವಾಲೆಗೆ ಎರಡು ರಾಸುಗಳು ಸಜೀವ ದಹನವಾಗಿದ್ದು, ಸುಟ್ಟಗಾಯಗಳಿಂದ ಐದು ಜಾನುವಾರುಗಳು ನರಳುತ್ತಿದೆ.

ಇದನ್ನೂ ಓದಿ:ಪ್ರತಿಯೊಬ್ಬ ಹಿಂದೂ ದೇಶಭಕ್ತನೇ, ಅದು ಹಿಂದೂಗಳ ಮೂಲಗುಣ: ಮೋಹನ್ ಭಾಗವತ್

Advertisement

ದನದ ಕೊಟ್ಟಿಗೆಯಲ್ಲಿ ಕೊಬ್ಬರಿ, ತೆಂಗಿನಕಾಯಿಗಳನ್ನೂ ಶೇಖರಿಸಿ ಇಡಲಾಗಿತ್ತು. ಆದರೆ ತಡರಾತ್ರಿ ಕೊಟ್ಟಿಗೆಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಜಾನುವಾರುಗಳನ್ನು ಸುಟ್ಟು ಹಾಕಿದ್ದಾರೆ. ತೆಂಗಿನ ಕಾಯಿ, ಕೊಬ್ಬರಿಯೂ ಭಸ್ಮವಾಗಿದೆ.

ಜನರ ನಡುವಿನ ದ್ವೇಷಕ್ಕೆ ಮೂಕ ಪ್ರಾಣಿಗಳನ್ನು ಸುಟ್ಟು ಹಾಕಿರುವ ದುಷ್ಕರ್ಮಿಗಳನ್ನು ಕೂಡಲೇ ಪತ್ತೆಹಚ್ಚಿ ಶಿಕ್ಷೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next