Advertisement
ಕಟ್ಟತ್ತಿಲ ಗೌರಿಕೋಡಿ ನಿವಾಸಿ ಸುನಂದಾ ಅವರ ಹಂಚಿನ ಮನೆಯಲ್ಲಿ ದುರುಂತ ಸಂಭವಿಸಿದೆ. ಮನೆಯಲ್ಲಿ ನಾಲ್ವರು ವಾಸಿಸುತ್ತಿದ್ದು, ಅವರು ರವಿವಾರ ಸಂಬಂಧಿಕರ ಮನೆಗೆ ತೆರಳಿದ್ದರು. ರವಿವಾರ ಸಂಜೆಯಿಂದಲೇ ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿತ್ತು. ಇದರ ಪರಿಣಾಮವಾಗಿ ಮನೆಯ ಸ್ವಿಚ್ ಬೋರ್ಡ್‌ನಲ್ಲಿ ಶಾರ್ಟ್‌ಸರ್ಕ್ನೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ ಟಿ.ವಿ., ಹೋಂ ಥಿಯೇಟರ್, ಫ್ಯಾನ್, ಡಿವಿಡಿ ಮೊದಲಾದ ವಿದ್ಯುತ್ ಉಪಕರಣಗಳು ಸುಟ್ಟು ಛಿದ್ರಗೊಂಡಿವೆ. ಮನೆಯ ಆರು ಕೋಣೆಗಳಲ್ಲಿ ಇದ್ದಂತಹ ಮನೆಯ ದಾಖಲೆ ಪತ್ರಗಳು, ಮೂರು ಕಪಾಟುಗಳು, ವಿವಿಧ ಫರ್ನಿಚರ್‌ಗಳು, ಬಟ್ಟೆಬರೆಗಳು, ಪಾತ್ರೆ ಸಾಮಗ್ರಿಗಳು, ಮನೆಯವರ ಇನ್ನಿತರ ದಾಖಲೆ ಪತ್ರಗಳು, 62 ಸಾ. ರೂ. ನಗದು ಬೂದಿಯಾಗಿದೆ. ಹೊಸ ಮನೆಯ ಕಾಮಗಾರಿಗಾಗಿ ತಂದಿರಿಸಿದ್ದ 4 ಲಕ್ಷ ರೂ. ಮೌಲ್ಯದ ಮರಮಟ್ಟುಗಳು, ಅಡಿಕೆಗಳು ಕೂಡ ಸುಟ್ಟು ಕರಕಲಾಗಿವೆ.
Related Articles
ಕನ್ಯಾನದ ಕೇಪುಳಗುಡ್ಡೆಯಲ್ಲಿರುವ ಆಮೀನ ಅಬ್ದುಲ್ಲ ಬ್ಯಾರಿಗೆ ಸೇರಿದ ಹಂಚಿನ ಮನೆಯಲ್ಲಿಯೂ ರವಿವಾರ ರಾತ್ರಿ ದುರಂತ ಸಂಭವಿಸಿ ಮನೆ ಭಾಗಶಃ ಸುಟ್ಟು ಹೋಗಿದ್ದು, ಸುಮಾರು 8 ಲ.ರೂ.ಗಿಂತಲೂ ಅಧಿಕ ನಷ್ಟ ಸಂಭವಿಸಿದೆ. ಮನೆ ಮಂದಿ ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಯಲ್ಲಿ ಮಲಗಿದ್ದರು. ರಾತ್ರಿ 12 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ 50 ಸಾ. ರೂ. ನಗದು, ವಿದ್ಯುತ್ ಉಪಕರಣಗಳು, ಬಟ್ಟೆಬರೆಗಳು, ಫರ್ನಿಚರ್, ಮೊದಲಾದ ಸೊತ್ತುಗಳು ಸುಟ್ಟು ಕರಕಲಾಗಿವೆ. ಘಟನೆ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಬೆಂಕಿ ನಂದಿಸಲು ಶ್ರಮಿಸಿದರೂ ಸಾಧ್ಯವಾಗಿಲ್ಲ. ವಿದ್ಯುತ್ ಕಾರಣದಿಂದ ಘಟನೆ ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ವಿಟ್ಲ ಕಂದಾಯ ನಿರೀಕ್ಷಕ ದಿವಾಕರ್, ಗ್ರಾಮಕರಣಿಕ ಪ್ರಶಾಂತ್ ಭೇಟಿ ನೀಡಿದ್ದಾರೆ.
Advertisement