Advertisement

ಕಾಡ್ಗಿಚ್ಚು ತಡೆಗೆ “ಬೆಂಕಿ ರೇಖೆ’

11:49 AM Jan 31, 2020 | Suhan S |

ದೇವನಹಳ್ಳಿ: ಕಾಡ್ಗಿಚ್ಚು ಇಡೀ ಜಗತ್ತನ್ನೇ ಕಾಡುತ್ತಿರುವ ದೊಡ್ಡ ಸಮಸ್ಯೆ. ಇತ್ತೀಚೆಗೆ ರಾಜ್ಯದ ಬಂಡೀಪುರ, ಆಸ್ಟ್ರೇಲಿಯ ಕಾಡಿನಲ್ಲಿ ಹಬ್ಬಿದ್ದ ಕಾಡ್ಗಿಚ್ಚಿಗೆ ಲಕ್ಷಾಂತರ ಪ್ರಾಣಿ ಮತ್ತು ಪಕ್ಷಿ ಸಂಕುಲ ಸೇರಿದಂತೆ ಅರಣ್ಯ ಸಂಪತ್ತನ್ನು ಕ್ಷಣ ಮಾತ್ರದಲ್ಲಿ ಬೆಂಕಿ ಆವರಿಸಿ ಸಂಪೂರ್ಣ ಕಾಡು ಬೆಂಕಿಯ ಕೆನ್ನಾಲಿಗೆಗೆ ಗುರಿಯಾಗಿತ್ತು. ಈ ರೀತಿ ಅನಾಹುತಗಳು ಜಿಲ್ಲೆಯಲ್ಲಿ ಆಗಬಾರದೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಬೆಂಕಿ ರೇಖೆಗಳನ್ನು ನಿರ್ಮಿಸುವುದರ ಮೂಲಕ ಮುನ್ನೆಚ್ಚರಿಕಾ ಕ್ರಮ ವಹಿಸಿದೆ.

Advertisement

ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಕಡೆಗಳಲ್ಲಿ ಕಳೆದ ವರ್ಷದಿಂದಲೇ ಜೆಸಿಬಿ ಯಂತ್ರದ ಮೂಲಕ ಬೆಂಕಿ ರೇಖೆಗಳನ್ನು ಅಳವಡಿಸಿ ಬೆಂಕಿಯನ್ನು ನಂದಿಸುವುದಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಲಾಗಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿನ ಅರಣ್ಯ ಪ್ರದೇಶದಲ್ಲಿ ಬೆಂಕಿ ರೇಖೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಕಾಡ್ಗಿಚ್ಚನ್ನು ನಿಯಂತ್ರಿಸಬಹುದು. ದೇವನಹಳ್ಳಿ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾಗುವ ಸಂದ ರ್ಭದಲ್ಲಿ ಸುಮಾರು 540 ಎಕರೆ ವಿಮಾನ

ಜಾಗವನು ನಿಲ್ದಾಣಕ್ಕಾಗಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಅದಕ್ಕೆ ಬದಲಿ ಜಾಗವಾಗಿ ದೊಡ್ಡಬಳ್ಳಾಪುರದಲ್ಲಿ 540 ಎಕರೆ ಸರ್ಕಾರ ಕಾಡು ಬೆಳೆಸಲು ಜಾಗವನ್ನು ನೀಡಿದೆ. ಜಿಲ್ಲೆಯ ಎಲ್ಲೆಡೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಬಾರದೆಂಬ ಉದ್ದೇಶವನ್ನು ಹೊಂದಿದ್ದು, ಮುನ್ನಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬೆಂಕಿ ಹರಡುವುದು ಹೇಗೆ ?: ಬೆಂಕಿ ರೇಖೆಗಳನ್ನು ನಿರ್ಮಿಸುವುದರಿಂದ ಅನಾಹುತಗಳನ್ನು ತಡೆಯಬಹುದು. ಕಾಡ್ಗಿಚ್ಚು ಆವರಿಸಿದ ಕೂಡಲೇ ಬೆಂಕಿ ನಿಂದಿಸಲು ಅನುಕೂಲವಾಗುವಂತೆ ರೇಖೆಗಳನ್ನು ನಿರ್ಮಿಸಲಾಗಿದೆ. ಮಾನವ ಕಾಡಿನ ಅಂಚಿನಲ್ಲಿ ಓಡ ನಾಟ ಇದ್ದಾಗ ಬೀಡಿ, ಸಿಗರೇಟ್‌ ಸೇದಿ ಬಿಸಾಡುವುದು, ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮೋಜು-ಮಸ್ತಿ ಸಂದರ್ಭದಲ್ಲಿ ಅಡುಗೆ ಮಾಡಿಕೊಳ್ಳುವುದು. ಉದ್ದೇಶ ಪೂರಕವಾಗಿ ಬೆಂಕಿ ಕಳೆ ಮುಂತಾದ ಬೇಡದಗಿಡಗಳ ನಾಶಕ್ಕೆ ಬೆಂಕಿ ಹಚ್ಚುವುದರಿಂದ ಅರಣ್ಯಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಜಿಲ್ಲೆಯ ನೆಲಮಂಗಲ ತಾಲೂಕಿನ ಬಳಗೆರೆ ಸುತ್ತಮುತ್ತಲಿನ ಅರಣ್ಯ ಪ್ರದೇಶ, ಕೊರಟಗೆರೆ ಮತ್ತು ನೆಲಮಂಗಲ ತಾಲೂಕಿನ ಗಡಿ ಅಂಚಿನಲ್ಲಿ, ಮಾಗಡಿ ಮತ್ತು ನೆಲಮಂಗಲ ಗಡಿಪ್ರದೇಶ, ದೇವನಹಳ್ಳಿ ತಾಲೂಕಿನ ಕೊುರಾ ಬೆಟ್ಟ, ಕೋಡಗುರ್ಕಿ, ಕಾರಹಳ್ಳಿ ಸಮೀಪದಲ್ಲಿರುವ ಪಂಚಗಿರಿಧಾಮಗಳಲ್ಲಿ ಒಂದಾದ ದಿಬ್ಬಗಿರಿ ಬೆಟ್ಟ, ನಾರಾಯಣಪುರ, ಬೆಟ್ಟಕೋಟೆ, ರಾಯಸಂದ್ರ, ಕೋರಮಂಗಲ ಅರಣ್ಯೇತರ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಕೊಯಿರ ಬೆಟ್ಟದಲ್ಲಿ, ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಅರಣ್ಯ ಪ್ರದೇಶದ ಸುತ್ತಮುತ್ತಲಿನಲ್ಲಿ ಕಾಡ್ಗಿಚ್ಚು ಹರಡುತ್ತಿದೆ.

ನೀಲಗಿರಿ ಮರಗಳ ತೆರವು: ಜಿಲ್ಲೆಯ ವ್ಯಾಪ್ತಿಯಲ್ಲಿ ಅರಣ್ಯದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿರುವ ನೀಲಗಿರಿ ಮರಗಳೇ ಕಾಡಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ ಎಂದು ವರದಿಗಳಿಂದ ತಿಳಿದು ಬಂದಿದೆ.ಈ ಮರಗಳ ನೆರಳಿನಲ್ಲಿ ಯಾವುದೇ ಗಿಡಮರಗಳು ಬೆಳೆಯುವುದಿಲ್ಲ. ಭೂಮಿಯೊಳಗಿನ ನೀರಿನ ಅಂಶವನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಹೀರಿಕೊಳ್ಳುವ ಮರಗಳು ಇವಾಗಿವೆ. ಅಲ್ಲದೆ, ನೀಲಗಿರಿ ಮರಗಳು ಬೆಂಕಿ ಬಿದ್ದಂತಹ ಸಮಯದಲ್ಲಿ ಕಾಡಿಗೆ ಬೆಂಕಿ ವ್ಯಾಪಿಸುವುದಕ್ಕೆ ಸಹಕಾರಿ ಯಾಗುವುದಲ್ಲದೆ, ಅತೀ ಶೀಘ್ರಗತಿಯಲ್ಲಿ ಬೆಂಕಿಯ ಕಿನ್ನಾಲಿಗೆ ಅರಣ್ಯಕ್ಕೆ ವ್ಯಾಪಿಸುತ್ತದೆ. ಹೀಗಾಗಿ ನೀಲಗಿರಿ ಮರಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.

Advertisement

ಜಿಲ್ಲೆಯಲ್ಲಿ 700 ಎಕರೆ ಅರಣ್ಯ ಪ್ರದೇಶ ಬೆಳೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಾಡ್ಗಿಚ್ಚು ತಡೆಗೆ ಬೆಂಕಿ ರೇಖೆಗಳ ನಿರ್ಮಾಣ ಮಾಡಲಾಗುತ್ತಿದೆ. ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಸಲುವಾಗಿ, ಬೀದಿ ನಾಟಕಗಳನ್ನು ಏರ್ಪಡಿಸಲಾಗುತ್ತಿದೆ. ಸಾರ್ವಜನಿಕರು ಸಲಹೆ ನೀಡಿದರೆ ಕಾಡ್ಗಿಚ್ಚು ತಡೆಗೆ ಸಹಕಾರಿಯಾಗುತ್ತದೆ. ಆಂಟೋನಿ ಮರಿಯಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ

 

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next