ಶ್ರೀನಗರ: ಅಗ್ನಿ ಆಕಸ್ಮಿಕ ಉಂಟಾದ ಕಾರಣದಿಂದ ಸುಮಾರು 20ಕ್ಕೂ ಹೆಚ್ಚು ಮನೆಗಳು ಸುಟ್ಟು ಹೋದ ಘಟನೆ ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದಿದೆ.
ಗುರುವಾರ ಸಂಜೆ ಈ ಘಟನೆ ನಡೆದಿದೆ. ಒಂದು ಮನೆಯಲ್ಲಿ ನಡೆದ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹತ್ತಿಕೊಂಡಿದ್ದು, ಕ್ಷಣ ಮಾತ್ರದಲ್ಲೇ ಪರಿಸರದ ಇತರ ಮನೆಗಳಿಗೆ ಹರಡಿದೆ.
ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿದ ಬೆಂಕಿ ನಂದಿಸಲಾರಂಭಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಲಂಕಾ ಪ್ರವಾಸಕ್ಕೆ ತಂಡ ಪ್ರಕಟ; ಧವನ್ ನಾಯಕತ್ವ, ಪಡಿಕ್ಕಲ್ ಸೇರಿ ಮೂವರು ಕನ್ನಡಿಗರಿಗೆ ಸ್ಥಾನ
ಸಪೂರ ರಸ್ತೆಗಳ ಕಾರಣದಿಂದ ಅಗ್ನಿ ಶಾಮಕ ದಳ ವಾಹನಗಳು ತೆರಳವುದು ಕಷ್ಟವಾಯಿತು ಎಂದು ಪೊಲೀಸರೊಬ್ಬರು ಹೇಳಿದ್ದಾರೆ. ಅದಾಗ್ಯೂ ಐದು ಅಗ್ನಿ ಶಾಮಕದ ದಳ ವಾಹನ ಮತ್ತು ಎರಡು ಸೇನಾ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ. ಸಾವು ನೋವುಗಳ ಬಗ್ಗೆ ಇನ್ನಷ್ಟೇ ವರದಿಯಾಗಬೇಕಿದೆ.