Advertisement

ಗ್ರಾಪಂ ದಾಖಲೆಗಳು ಬೆಂಕಿಗಾಹುತಿ

05:10 PM Mar 20, 2021 | Team Udayavani |

ಶ್ರೀನಿವಾಸಪುರ: ಗ್ರಾಪಂಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಸುಟ್ಟು ಭಸ್ಮವಾಗಿರುವ ಘಟನೆ ಚಲ್ದಿಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದಿದ್ದು, ಈ ಬಗ್ಗೆ ಕೋಲಾರ ಜಿಪಂ ಸಿಇಒ ಎನ್‌. ಎಂ.ನಾಗರಾಜ್‌ ಹಾಗು ತಾಪಂ ಇಒ ಎಸ್‌. ಆನಂದ್‌, ಮತ್ತು ಸಿಪಿಐ ಸಿ.ರವಿಕುಮಾರ್‌ ಸೇರಿ ಪೊಲೀಸರು ಸ್ಥಳಕ್ಕಾಗಮಿಸಿದರು.

Advertisement

ಗ್ರಾಪಂಗೆ ಸಂಬಂಧಿಸಿದ ಉದ್ಯೋಗ ಖಾತ್ರಿ ಯೋಜನೆ, ಸ್ವತ್ಛ ಭಾರತ್‌ ಮಿಷನ್‌, ವಸತಿ ಯೋಜನೆ ಹಾಗೂ ಇನ್ನಿತರ ಯೋಜನೆಗಳಿಗೆ ಸಂಬಂಧಿಸಿ ಮಹತ್ವದ ದಾಖಲೆಗಳು ನಾಶವಾಗಿವೆ. ಇದರ ಹಿಂದೆ ಪ್ರಭಾವಿಗಳು ಇದ್ದು ಅಕ್ರಮ ಬಯಲಿಗೆ ಬರುವ ಕಾರಣ ಉದ್ದೇಶಪೂರ್ವಕವಾಗಿ ಕಡತಗಳಿಗೆ ಬೆಂಕಿ ಹಚ್ಚಿದ್ದಾರೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿ ಸಿದ್ದಾರೆ. ಗ್ರಾಪಂ ಸಮಿತಿ ಅಸ್ತಿತ್ವಕ್ಕೆ ಬಂದು ಒಂದೂವರೆ ತಿಂಗಳಾಗುತ್ತಿದೆ. ಒಂದೇ ಬಾರಿ ಸಾಮಾನ್ಯ ಸಭೆ ನಡೆಸಲಾಗಿದ್ದು, ಅಷ್ಟರಲ್ಲಿ ಈ ಘಟನೆ ನಡೆದಿದೆ. ಪಂಚಾಯ್ತಿ ಕಟ್ಟಡದಲ್ಲಿದ್ದ ಕಡತಗಳನ್ನು ಹಾಗೂ ಬೀರು, ಟೇಬಲ್‌, ಕುರ್ಚಿ ಇನ್ನಿತರ ವಸ್ತುಗಳನ್ನು ಮಾ.8ರಂದು ಪಿಡಿಒ ಶಂಕರಪ್ಪ ರವರು ಇದೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣ ದಲ್ಲಿರುವ ಸಮುದಾಯ ಭವನಕ್ಕೆ ಸ್ಥಳಾಂತರ ಮಾಡಿದ್ದಾರೆ.

ಈ ಬೆಳವಣಿಗೆಯಿಂದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಇತರೆ ಸದಸ್ಯರು ಒಳಗೊಂಡು ಮಾ.15ರಂದು ಜಿಪಂ ಕಚೇರಿಗೆ ತೆರಳಿ ಸಿಇಒಗೆ ದೂರು ನೀಡಿ ನಮ್ಮ ಗಮನಕ್ಕೆ ತರದೇ ಪಿಡಿಒ ಶಂಕರಪ್ಪ ಪಂಚಾಯ್ತಿ ಕಟ್ಟಡದಲ್ಲಿದ್ದ ಕಡತಗಳನ್ನು ಸಮುದಾಯಕ್ಕೆ ಭವನಕ್ಕೆ ಬದಲಾಯಿಸಿದ್ದಾರೆಂದು ದೂರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next