Advertisement

ಮುಂಬಯಿ ವಸತಿ ಕಟ್ಟಡದಲ್ಲಿ ಭಾರೀ ಬೆಂಕಿ; ಜೀವ ಹಾನಿ ಇಲ್ಲ

07:12 AM Feb 20, 2019 | udayavani editorial |

ಮುಂಬಯಿ : ದಕ್ಷಿಣ ಮುಂಬಯಿಯ ವಸತಿ ಕಟ್ಟಡದಲ್ಲಿ ಇಂದು ನಸುಕಿನ ವೇಳೆ ಭಾರೀ ಅಗ್ನಿ ಅನಾಹುತ ಸಂಭವಿಸಿತು. ಆದರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಅಗ್ನಿ ಶಾಮಕ ದಳದ ಮುಖ್ಯಸ್ಥ ಪಿ ಎಸ್‌ ರಹಂಗದಾಳೆ ತಿಳಿಸಿದ್ದಾರೆ. 

Advertisement

Breach Candy ಪ್ರದೇಶದಲ್ಲಿನ 9 ಮಹಡಿಗಳ ಧರಂ ವಿಲ್ಲಾ ವಸತಿ ಕಟ್ಟಡದಲ್ಲಿ  ನಸುಕಿನ 12.36ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತು. ಕಟ್ಟಡದ ನಾಲ್ಕನೇ ಮಹಡಿಯಿಂದ 9ನೇ ಮಹಡಿಯ ತನಕದ ಇಲೆಕ್ಟ್ರಿಕ್‌ ಡಕ್ಟ್  ಮತ್ತು ವಯರಿಂಗ್‌, ಕಾಮನ್‌ ಪ್ಯಾಸೇಜ್‌, ಲಿಫ್ಟಿ ಲಾಬ್ಬಿ, ದ್ವಾರಗಳು, ಕಿಟಕಿಗಳು ಮತ್ತು ಮರದ ಪ್ಯಾನಲಿಂಗ್‌ ಗಳು ಬೆಂಕಿಯಲ್ಲಿ ಸುಟ್ಟು ಕರಕಲಾದವು. 

ಸುಮಾರು ಮೂರೂವರೆ ತಾಸುಗಳ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕದಳ ಬೆಂಕಿಯನ್ನು ನಂದಿಸುವಲ್ಲಿ ಸಫ‌ಲವಾಯಿತು. ಬೆಂಕಿ ಅನಾಹುತಕ್ಕೆ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next