Advertisement

ಲಕ್ಷ್ಮೀಪುರಂನಲ್ಲಿ ಅಗ್ನಿ ಅವಘಡ : ನಾಲ್ಕು ಕಾರು ಭಸ್ಮ

07:12 PM Dec 27, 2021 | Team Udayavani |

ಮೈಸೂರು : ಆಕಸ್ಮಿಕ ಬೆಂಕಿ ತಗುಲಿ ಕಾರು ಶೋರೂಂನದಲ್ಲಿದ್ದ ನಾಲ್ಕು ಕಾರುಗಳು ಭಸ್ಮವಾಗಿರುವ ಘಟನೆ ನಡೆದಿದೆ. ನಗರದ ಜೆಎಲ್‌ಬಿ ರಸ್ತೆಯಲ್ಲಿನ ಲಕ್ಷ್ಮೀಪುರಂನಲ್ಲಿರುವ ಅದ್ವೆ„ತ್‌ ಹುಂಡೈ ಶೋರೂಂನಲ್ಲಿ ಭಾನುವಾರ ಬೆಳಗ್ಗೆ 8.30ರ ಸಮಯದಲ್ಲಿ ಈ ಘಟನೆ ನಡೆದಿದೆ.

Advertisement

ಅಗ್ನಿಶಾಮಕ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆಯಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಶೋ ರೂಮ್‌ನಲ್ಲಿನ ಕೆಳ ಮಹಡಿಯಲ್ಲಿರುವ ಸರ್ವಿಸ್‌ ಸ್ಟೇಷನ್‌ನಿಂದ ಹೊಗೆ ಬರುತ್ತಿರುವುದನ್ನು ಗಮ  ನಿಸಿದ ಸಾರ್ವಜನಿಕರು, ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ತುರ್ತು ಕಾರ್ಯಾ ಚರಣೆ ಆರಂಭಿಸಿ ಬೆಂಕಿ ಮೇಲ್ಮಹಡಿಗೆ ವ್ಯಾಪಿಸದಂತೆ ಮಾಡುವಲ್ಲಿ ಯಶಸ್ವಿಯಾದರು.

ಬೆಂಕಿಯಿಂದಾಗಿ ಸರ್ವಿಸ್‌ ಸ್ಟೇಷನ್‌ ನಲ್ಲಿದ್ದ ಒಂದು ಹೊಸ ಕಾರು ಭಾಗಶಃ ಹಾಗೂ ಸರ್ವಿಸ್‌ ಗಾಗಿ ಗ್ರಾಹಕರು ಬಿಟ್ಟಿದ್ದ ಮೂರು ಕಾರುಗಳಿಗೆ ಅಗ್ನಿ ಅನಾಹುತದಿಂದ ಅಲ್ಪ ಪ್ರಮಾಣದ ಹಾನಿಯುಂಟಾಗಿದೆ. ಜತೆಗೆ ಕಾರಿನ ಬಿಡಿಭಾಗಗಳು, ಬ್ಯಾಟರಿಗಳು, ಆಯಿಲ್‌ ಗಳೆಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿವೆ. ಕೂಡಲೇ ನಾಲ್ಕು ಅಗ್ನಿಶಾಮಕ ವಾಹನಗಳನ್ನು ಕೊಂಡೊಯ್ದು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಲಾಯಿತು. ಇದರಿಂದ ಬೆಂಕಿ ಸರ್ವಿಸ್‌ ಸ್ಟೇಷನ್‌ ನಿಂದ ಮೇಲಿನ ಮಹಡಿಗೆ ವ್ಯಾಪಿಸುವುದನ್ನು ತಡೆಗಟ್ಟಿದಂತಾಯಿತು ಎಂದು ಅಗ್ನಿಶಾಮಕ ಠಾಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಯಚರಣೆ  ಯಲ್ಲಿ ಮುಖ್ಯ ಅಗ್ನಿ ಶಾಮಕಾಧಿಕಾರಿ ಜಯರಾಮು, ಪ್ರಾದೇಶಿಕ ಅಗ್ನಿ ಶಾಮಕಾಧಿಕಾರಿ ನವೀನ್‌ಕುಮರ್‌, ಜಿಲ್ಲಾ ಅಗ್ನಿಶಾಮಕಾಧಿಕಾರಿ ಗಂಗಾ ನಾಯಕ್‌, ಚಂದನ್‌, ಅಗ್ನಿ ಶಾಮಕ ಠಾಣಾಧಿಕಾರಿ ನಾಗರಾಜ ಅರಸ್‌, ಶಿವಸ್ವಾಮಿ ನೇತೃತ್ವದಲ್ಲಿ 30 ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next