Advertisement

ಚಿಟ್ಟಾ ಅರಣ್ಯದಲಿ ಬೆಂಕಿ-ಅಪಾರ ಹಾನಿ

12:36 PM Mar 30, 2022 | Team Udayavani |

ಬೀದರ: ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಮಂಗಳವಾರ ನಗರದ ಹೊರವಲಯದ ಚಿಟ್ಟಾ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಏಕಾಏಕಿ ಬೆಂಕಿ ತಗುಲಿ ಎರಡ್ಮೂರು ಎಕರೆಯಷ್ಟು ಅರಣ್ಯ ಭೂಮಿ ನಾಶವಾಗಿದೆ.

Advertisement

ಬೀದರ-ಚಿಂಚೋಳಿ ರಸ್ತೆಯ ಪಕ್ಕದಲ್ಲಿರುವ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದ್ದು, ಧಗಧಗನೇ ಹೊತ್ತಿ ಉರಿದಿದೆ. ಅಪಾರ ಪ್ರಮಾಣದ ಗಿಡ-ಮರಗಳು ಬೆಂಕಿಗೆ ಆಹುತಿಯಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಬಿಸಿಲ ಜತೆಗೆ ಬೆಂಕಿಯ ತಾಪದಿಂದ ಪರದಾಡಬೇಕಾಯಿತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಡೆದಿದ್ದಾರೆ. 112 ಪೊಲೀಸ್‌ ಸಿಬ್ಬಂದಿ ಕೂಡ ಭೇಟಿ ನೀಡಿ, ಯಾರೋ ಕಿಡಿಗೇಡಿಗಳು ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next