Advertisement

ಕಿಡಿಕೇಡಿಗಳಿಂದ ಕಾಲೇಜು ಕೊಠಡಿಗೆ ಬೆಂಕಿ

12:39 PM Jul 26, 2018 | Team Udayavani |

ಪಿರಿಯಾಪಟ್ಟಣ: ಕಿಡಿಗೇಡಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿಗೆ ಬೆಂಕಿ ಹಚ್ಚಿದ್ದರಿಂದ ದಾಖಲೆಗಳು ನಾಶವಾಗಿರುವ ಘಟನೆ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ನಡೆದಿದೆ.  

Advertisement

ತಾಲೂಕಿನ ಕಿತ್ತೂರು ಕಾಲೇಜು ಆವರಣದಲ್ಲಿ ಪ್ರತಿನಿತ್ಯ ಸಂಜೆ 5 ಗಂಟೆ ಬಳಿಕ ಗ್ರಾಮದ ಯುವಕರ ಗುಂಪೊಂದು ಇಲ್ಲಿ ಮದ್ಯ ಕುಡಿದು ಬಾಟಲಿ ಬಿಸಾಡುವುದು, ಇಸ್ಪೀಟು ಆಡುವುದು ಸೇರಿದಂತೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಪ್ರತಿದಿನ ಇಲ್ಲಿಗೆ ಕಿಡಿಗೇಡಿಗಳ ಗುಂಪು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು ಇದನ್ನು ನಿಯಂತ್ರಿಸುವಂತೆ ಬೆಟ್ಟದಪುರ ಪೊಲೀಸರಿಗೆ ಹಲವಾರು ಬಾರಿ ದೂರು ನೀಡಲಾಗಿತ್ತು. 

ಪೊಲೀಸರು ಹಲವಾರು ಬಾರಿ ಜೂಜುಕೋರರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿದ್ದರೂ, ಕಿಡಿಗೇಡಿಗಳ ಅಟ್ಟಹಾಸ ಮುಂದುವರಿದಿದ್ದು, ಇದೀಗ ಪ್ರಾಂಶುಪಾಲರ ಕೊಠಡಿಗೆ ಬೆಂಕಿ ಹಚ್ಚಿ, ಮಹತ್ವದ ದಾಖಲೆಗಳನ್ನು ನಾಶಪಡಿಸಿರುವುದು ಪೋಷಕರಲ್ಲಿ ಆತಂಕ ಉಂಟು ಮಾಡಿದೆ.

ಕೃತ್ಯವೆಸಗಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರಾದ ದಿನೇಶ್‌, ಮಹದೇವ್‌ ಶೆಟ್ಟಿ ಮತ್ತು ಪಾಪಣ್ಣ, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್‌ ಒತ್ತಾಯಿಸಿದರು. ಘಟನಾ ಸ್ಥಳಕ್ಕೆ ಸಿಪಿಐ ಸಿದ್ದಯ್ಯ ಪಿಎಸ್‌ಐ ಚಿಕ್ಕಸ್ವಾಮಿ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next