Advertisement

ಸಸಿಹಿತ್ಲು: ಶಾರ್ಟ್ ಸಕ್ಯೂಟ್‌ನಿಂದ ಮನೆಗೆ ಬೆಂಕಿ

12:07 PM Sep 24, 2019 | Team Udayavani |

ಹಳೆಯಂಗಡಿ: ಶಾರ್ಟ್ ಸಕ್ಯೂಟ್‌ನಿಂದಾಗಿ ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಹಳೆಯಂಗಡಿ ಗ್ರಾಮ ಪಂಚಾಯತ್ ಬಳಿಯ ಸಸಿಹಿತ್ಲುವಿನ ಮುಂಡ ಬೀಚ್ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.

Advertisement

ಮುಂಡದಾಂಡಿ ಮನೆಯ ಪದ್ಮನಾಭ ಅಂಚನ್ ಅವರ ಮನೆಯ ಅಡುಗೆ ಕೋಣೆಯಲ್ಲಿದ್ದ ಫ್ರಿಡ್ಜ್‌ನಿಂದ ವಿದ್ಯುತ್ ಹರಿದು ಮನೆಯ ಸಂಪೂರ್ಣ ವಿದ್ಯುತ್ ತಂತಿಗೆ ಹರಡಿ ಮನೆಯ ಮೇಲ್ಛಾವಣಿಗೆ ಹಬ್ಬಿ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿದೆ.

ಪೈಂಟರ್ ವೃತ್ತಿಯ ನಡೆಸುತ್ತಿರುವ ಪದ್ಮನಾಭ ಸಹಿತ ಮನೆಯಲ್ಲಿ ಅವರ ಪತ್ನಿ ಇಬ್ಬರು ಮಕ್ಕಳಾದ ಧೀರಜ್ ಮತ್ತು ದೀಕ್ಷಿತ ಇದ್ದು ಇವರೆಲ್ಲ ಕೆಲಸಕ್ಕೆಂದು ತೆರಳಿದ್ದರು. ಮನೆಯ ಮೇಲ್ಛಾವಣಿ ಸಹಿತ ಹೊತ್ತಿ ಉರಿದ ಮನೆಯ ಬೆಂಕಿಯನ್ನು ನಂದಿಸಲು ಸ್ಥಳೀಯರು ಸಹಕಾರ ನೀಡಿದರು.
ಅಗ್ನಿಶಾಮಕ ದಳದ ಸಿಬಂದಿಗಳು ಬಂದು ಬೆಂಕಿಯನ್ನು ನಂದಿಸಿದರು.

ಮನೆಯಲ್ಲಿದ್ದ ಅನೇಕ ವಸ್ತುಗಳು ಬೆಂಕಿ ಕೆನ್ನಾಲಿಗೆಗೆ ಕರಟಿದ್ದು, ಗೋಡೆಗೂ ಸಾಕಷ್ಟು ಹಾನಿಯಾಗಿದೆ. ಕನಿಷ್ಠ 3 ಲಕ್ಷದಷ್ಟು ಹಾನಿ ಉಂಟಾಗಿದೆ ಎನ್ನಲಾಗಿದೆ. ಕಂದಾಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾನಿಗೊಂಡ ಮನೆಗೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next