Advertisement

 ಗುಂಡಿನ ಕಾಳಗ:3 ಯೋಧರು ಹುತಾತ್ಮ; ಲಷ್ಕರ್‌ ಕಮಾಂಡರ್‌ ಹತ್ಯೆ 

10:06 AM Feb 14, 2017 | |

ಶ್ರೀನಗರ : ಬಂಡಿಪೋರಾದ ಹಾಜಿನ್‌ ಎಂಬಲ್ಲಿ ಮಂಗಳವಾರ ಬೆಳಗ್ಗೆ ಉಗ್ರರು ಮತ್ತು ಸೇನಾ ಪಡೆಗಳ ನಡುವೆ ಭಾರೀ ಗುಂಡಿನ ಕಾಳಗ ನಡೆದಿದ್ದು, ಮೂವರು ಯೋಧರು ಹುತಾತ್ಮರಾಗಿದ್ದು, ಇದೇ ವೇಳೆ ಲಷ್ಕರ್‌ ಎ ತೋಯ್ಬಾ  ಕಮಾಂಡರ್‌ನೊಬ್ಬನನ್ನು ಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ.

Advertisement

ಜನ ಸಂಚಾರ ವಿರುವ ಪ್ರದೇಶ ಪರ್ರೆ ಮೊಹಲ್ಲಾ ಎಂಬಲ್ಲಿ ಮನೆಯೊಂದರಲ್ಲಿ ಉಗ್ರರು ಅಡಗಿದ್ದ ಕಾರಣ ಗುಂಡಿನ ಚಕಮಕಿಯ ವೇಳೆ ನಾಗರಿಕರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ. 

ಬೆಳಗ್ಗೆ 5.30 ರ ವೇಳೆಗೆ ಆರಂಭಗೊಂಡ ಗುಂಡಿನ ಚಕಮಕಿ ಮುಂದುವರಿದಿದ್ದು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next