Advertisement

ಪಟಾಕಿ ನಿರ್ಬಂಧ ಕುಂಬಾರನಿಗೆ ವರವಾಗಲಿ

08:50 PM Nov 13, 2020 | Suhan S |

ಚಿಕ್ಕನಾಯಕನಹಳ್ಳಿ: ದೀಪಾವಳಿ ಹಿಂದುಗಳಿಗೆ ಅತ್ಯಂತ ಶೇಷ್ಠ ಹಾಗೂ ವಿಜೃಂಭಣೆಯ ಬೆಳಕಿನ ಹಬ್ಬ, ವರ್ಷದಕೊನೆಯಲ್ಲಿ ಈ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಕೋವಿಡ್‌ ಪಟಾಕಿ ಸದ್ದನ್ನು ನುಂಗಿದ್ದು, ಕುಂಬಾರನ ಹಣತೆ ಕಡೆ ಹಬ್ಬ ಆಚರಣೆ ಮಾಡುವವರು ಮುಖ ಮಾಡಬೇಕಿದೆ.

Advertisement

ಕೋವಿಡ್‌ ಲಾಕ್‌ಡೌನ್‌ನಲ್ಲಿ ನಲುಗಿರುವ ಕುಂಬಾರರ ಬದುಕಿಗೆ ಈ ದೀಪಾವಳಿ ವರವಾಗುತ್ತದೆಯೋಕಾಯ್ದು ನೋಡಬೇಕಿದೆ. ಸಮಾಜದಲ್ಲಿ ಆಧುನಿಕತೆ ಬೆಳೆದಂತೆ, ಸಾಂಪ್ರದಾಯಿಕ ಆಚರಣೆಗಳು ಬದಲಾದವು, ಸುಲಭವಾಗಿ ಹಬ್ಬಗಳನ್ನು ಆಚರಣೆ ಮಾಡುವುದನ್ನು ಜನರು ರೂಢಿಸಿಕೊಮಡರು, ಇದರಿಂದ ಊರಿನಲ್ಲೆ ನಮ್ಮ ಜೊತೆಗಿದ್ದ ಕುಂಬಾರರು ಬೀದಿಗೆ ಬೀಳುತ್ತಾ ಸಾಗಿದರು. ಪರಂಪರೆಯಿಂದ ನಡೆಸಿಕೊಂಡು ಬರುತ್ತಿದ್ದತನ್ನ ಕಸುಬನ್ನು ನಿಲ್ಲಿಸಲು ಮಾನಸಿಕವಾಗಿಸಿದ್ಧಗೊಂಡನ್ನು, ಇದರ ಫ‌ಲವಾಗಿಯೇ ಇಂದುಗುಡಿಕೈಗಾರಿಕೆಗಳು ನಾಶವಾಗುತ್ತಿವೆ. ಪಟಾಕಿ ವಿದ್ಯುತ್‌ ದೀಪಗಳ ಅಬ್ಬರದಲ್ಲಿ ಗಾಂಭೀರ್ಯವಾಗಿ ಬೆಳಕು ನೀಡುವ ಹಣತೆಯ ಬೇಡಿಕೆಕಡಿಮೆಯಾಗಿತ್ತು. ಆದರೆ ಕೊವೀಡ್‌ ವೈರಸ್‌Õದೀಪಾವಳಿಗೆ ನಿಯಮವನ್ನು ನಿಗದಿಸಿದ್ದು ಪಟಾಕಿಗಳಿಗೆ ತಡೆ ನೀಡಿ ಸಂಪ್ರಾದಾಯಕ ಆಚರಣೆಗೆ ಪ್ರೇರಣೆ ನೀಡಿದೆ.  ಮನೆಯಲ್ಲಿ ಈ ವರ್ಷ ಹೆಚ್ಚಹೆಚ್ಚು ಹಣತೆಗಳನ್ನು ಖರೀದಿಸಿ ದೀಪ ಬೆಳಗುವುದರಿಂದ ವ್ಯಾಪಾರವಿಲ್ಲದೆ ಬೇಸರವಾಗಿರುವ ಕುಂಬಾರನ ಮುಖದಲ್ಲಿ ಬೆಳಕು ಮೂಡುತ್ತದೆ.

ಪಟಾಕಿ ದುಡ್ಡು, ಹಣತೆ ಖರೀದಿಗೆ ವಿನೋಗವಾಗಲಿ: ಕೋವಿಡ್‌ ವೈರಸ್‌ ಆರ್ಭಟ ಇನ್ನೂ ಹೆಚ್ಚಾಗುತ್ತಿದ್ದು, ಈ ವರ್ಷದ ದೀಪಾವಳಿಯಲ್ಲಿ ಪಟಾಕಿ ಶಬ್ದ ಮಾಡದಂತೆ ಸರ್ಕಾರ ನಿರ್ಬಂಧವಿಧಿಸಿದ್ದು, ಸಂಪ್ರಾದಾಯಿಕ ಆಚರಣೆ ಮರುಕಳಿಸಲು ದಾರಿಯಾಗಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಜೊತೆ ದುಬಾರಿ ವೆಚ್ಚ ಜನಸಾಮಾನ್ಯರಿಗೆ ತೆಲೆ ನೋವಾಗಿತ್ತು. ಪ್ರತಿಷ್ಠೆಗೆ ಪಟಾಕಿ ಅಚ್ಚುವ ಹುಚ್ಚು ಸಹ ಸಾಮಾನ್ಯವಾಗಿತ್ತು. ಇದಕ್ಕೆಲ್ಲ ಕೊರೊನಾ ತಡೆ ಮಾಡಿದ್ದು. ಈ ಬಾರಿ ಪಾಟಾಕಿ ಅಚ್ಚಲು ವಿನೋಗಿಸುತ್ತಿದ್ದ ಹಣದಲ್ಲಿ ಹಣತೆಗಳನ್ನು ಖರೀದಿ ಮಾಡಿ ಹೆಚ್ಚು ಹೆಚ್ಚು ದೀಪಗಳನ್ನು ಹಬ್ಬದ ದಿನ ಉರಿಸುವುದರಿಂದ ಮನೆ ತುಂಬ ಬೆಳಕು ಆಗುತ್ತದೆ. ಹಣತೆ ತಯಾರು ಮಾಡುವಕುಂಬಾರನ ಬದುಕಿಗೂ ಹೊಸ ಚೈತನ್ಯ ಬರುತ್ತದೆ. ಸಾರ್ವಜನಿಕರುಈವರ್ಷದ ಕಡೆಯ ಹಬ್ಬವನ್ನು ವಂಶಪಾರಂಪರೆಯಿಂದ ನಡೆಸಿಕೊಂಡು ಬಂದ ಹಣತೆ ತಯಾರಿಕರಿಗೆ ಮೀಸಲಿಟ್ಟರೆ ಉತ್ತಮ.

 

ಚೇತನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next