Advertisement

ಪುಣೆ : ಕೆಮಿಕಲ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ : 12 ಮಂದಿ ಸಜೀವ ದಹನ

09:05 PM Jun 07, 2021 | Team Udayavani |

ಪುಣೆ : ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು  ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 12 ಮಂದಿ ಸಜೀವ ದಹನಗೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ಇಂದು(ಸೋಮವಾರ, ಜೂನ್ 7) ಸಂಜೆ ನಡೆದಿದೆ.

Advertisement

ಮಹಾರಾಷ್ಟ್ರದ ಪುಣೆಯ ಘೋಟವಾಡ ಫಾಟಾದ ಖಾಸಗಿ ಕೆಮಿಕಲ್ ಕಾರ್ಖಾನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಕಾರ್ಖಾನೆಯ ಒಳಗೆ ಇರುವವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂಬುವುದಾಗಿ ವರದಿಯಾಗಿದೆ.

 ಇದನ್ನೂ ಓದಿ : 2020ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ತಂಡಕ್ಕೆ ಹಣ ಬಿಡುಗಡೆ ಮಾಡಿದ ಬಿಸಿಸಿಐ

ಕಾರ್ಖಾನೆಯೊಳಗೆ ಒಳಗೆ 37 ಮಂದಿ ಕಾರ್ಮಿಕರುಕಾರ್ಯ ನಿರ್ವಹಿಸುತ್ತಿದ್ದರು ಆ ಪೈಕಿ 12 ಮಂದಿ ಬೆಂಕಿಯಿಂದ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಖಾನಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮಾಹಿತಿ ತಿಳಿದು ಪುಣೆ ಅಗ್ನಿಶಾಮಕ ದಳದ ಎಂಟು ತಂಡಗಳು ಧಾವಿಸಿ, ಬೆಂಕಿ ನಂದಿಸುವ ಹಾಗೂ ಕಾರ್ಖಾನೆಯಲ್ಲಿರುವ 37 ಮಂದಿ ಕಾರ್ಮಿಕರಲ್ಲಿ 20 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರೂ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Advertisement

ಇನ್ನು,  ರಕ್ಷಣಾ ಕಾರ್ಯಾಚರಣೆ ಇನ್ನೂ ಕೂಡ ಮುಂದುವರಿದಿದ್ದು, 5 ಮಂದಿ ಇನ್ನೂ ಸಿಕ್ಕಿಲ್ಲ ಎಂಬ ಮಾಹಿತಿ ದೊರಕಿದೆ. ಇಲ್ಲಿಯವರೆಗೆ ಪತ್ತೆಯಾಗದಿರುವ ಕಾರ್ಮಿಕರಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

 ಇದನ್ನೂ ಓದಿ : ಕೋವಿಡ್ ವಾಸಿಯಾದವರಲ್ಲಿ ಚರ್ಮರೋಗ : ದೆಹಲಿ, ಮುಂಬೈ ನಗರಗಳಲ್ಲಿ ಕಾಣಿಸಿಕೊಂಡ ಹೊಸ ಸಮಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next