Advertisement

ದುರಂತ:’ಹರ ಹರ ಮಹಾದೇವ’ಕನ್ನಡ ಸೀರಿಯಲ್‌ ಸೆಟ್‌ ಸಂಪೂರ್ಣ ಭಸ್ಮ!

05:11 PM Apr 15, 2017 | |

ಮುಂಬಯಿ : ಇಲ್ಲಿನ ವಾಸಿಯ ಮ್ಯಾಗ್ನಂ ಸ್ಟುಡಿಯೋದಲ್ಲಿ ಕನ್ನಡದ ಜನಪ್ರಿಯ ಧಾರಾವಾಹಿ ‘ಹರ ಹರ ಮಹಾದೇವ’ ಚಿತ್ರೀಕರಣ ಸೆಟ್‌ನಲ್ಲಿ  ಶನಿವಾರ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಷಾತ್‌ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 

Advertisement

ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಸೆಟ್‌ ತುಂಬಾ ವ್ಯಾಪಿಸಿಕೊಂಡಿದೆ. ಬೆಂಕಿ ಕಾಣಿಸುತ್ತಿದ್ದಂತೆ ಕಲಾವಿದರು, ತಂತ್ರಜ್ಞರು ಸೆಟ್‌ನಿಂದ ಹೊರಗೋಡಿ ಬಂದಿದ್ದಾರೆ. 

ಸೆಟ್‌ ಸಂಪೂರ್ಣ ಭಸ್ಮ ವಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ. 

ಸುವರ್ಣ ವಾಹಿನಿಯಲ್ಲಿ ರಾತ್ರಿ 7.30ರಿಂದ 8.30ರವರೆಗೆ ಪ್ರಸಾರವಾಗುವ ಹರ ಹರ ಮಹಾದೇವ ಧಾರಾವಾಹಿ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next