Advertisement
ನಗರಸಭೆಯಿಂದ ಹಿಂದೆ 24ಗಂಟೆ ನೀರು ಪೂರೈಕೆಯಾಗುತ್ತಿತ್ತು. ಅದೇ ರೀತಿ ಕಾರ್ಕಳ, ಕುಂದಾಪುರ, ಬೈಂದೂರು, ಮಲ್ಪೆ ಭಾಗದ ಠಾಣೆಗಳಿಗೂ ಸ್ಥಳೀಯಡಳಿತ ಸಂಸ್ಥೆಗಳಿಂದ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಉಡುಪಿ ಅಗ್ನಿ ಶಾಮಕ ದಳ ಠಾಣೆಗೆ ನಿತ್ಯ20ರಿಂದ 25 ಸಾವಿರ ಲೀ. ಅಗತ್ಯವಿದೆ. ಠಾಣೆಯಲ್ಲಿ 2 ಲಕ್ಷ ಲೀಟರ್ ಮಟ್ಟದ ನೆಲಮಹಡಿ ಜಲ ಸಂಗ್ರಹ ಟ್ಯಾಂಕ್ ಇದೆ. ನಗರಸಭೆ ಈ ಹಿಂದೆ ನಿರಂತರ ನೀರು ಪೂರೈಕೆ ಮಾಡುತ್ತಿದ್ದಾಗ ಇದು ಯಾವಾಗಲು ಭರ್ತಿ ಇರುತ್ತಿತ್ತು.
ಪ್ರಸ್ತುತ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ಗಂಭೀರ ಸ್ವರೂಪ ಪಡೆದುಕೊಂಡಿಲ್ಲ. ಹೊಟೇಲ್, ಕೆಲವು ವಸತಿ ಸಮುತ್ಛಯಗಳಲ್ಲಿ ನೀರಿನ ಕೊರತೆ ಕಾಡಲಾರಂಭಿಸಿದ್ದು, ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಮಣಿಪಾಲ ಸಹಿತ ನಗರದ ಕೆಲವು ಎತ್ತರದ ಪ್ರದೇಶಗಳಲ್ಲಿ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ನೀರಿನ ಕೊರತೆ ನಡುವೆಯೂ ಎರಡು ದಿನಗಳ ಹಿಂದೆ ಪೈಪ್‌ಲೈನ್‌ಗೆ ಹಾನಿಯಾಗಿ ನಗರದಲ್ಲಿ ಮೂರು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಪ್ರಸ್ತುತ ಬಜೆ ಡ್ಯಾಂನಲ್ಲಿ ಮೇ.15ರವರೆಗೆ ನೀರಿನ ಸಂಗ್ರಹ ಇದೆ. ಮುಂದಿನ 10ದಿನದ ಒಳಗೆ ಮಳೆ ಬಾರದಿದ್ದರೇ ಪರಿಸ್ಥಿತಿ ಕಷ್ಟವಿದ್ದು, ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವ ಸಂದಿಗªತೆ ಎದುರಾಗಬಹುದು.
Related Articles
ನೀರಿನ ಪೈಪ್‌ಗೆ ಹಾನಿಯಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಸರಿಪಡಿಸಲಾಗಿದೆ. ಒಂದು ದಿನದಲ್ಲಿ ಎಲ್ಲೆಡೆ ನೀರು ಪೂರೈಕೆ ಮುಂಚಿನಂತೆ ಸರಾಗವಾಗಿರಲಿದೆ. ಬಜೆಯಲ್ಲಿ ನಿತ್ಯ 30 ಎಂಎಲ್‌ಡಿ ನೀರು ಪಂಪ್ ಮಾಡಲಾಗುತ್ತಿದ್ದು, ಮೇ ಮೊದಲ ವಾರದವರೆಗೂ ನೀರು ಲಭ್ಯವಿದೆ. ಮಳೆ ಬಾರದೆ ಇದ್ದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ.
–ಆರ್. ಪಿ. ನಾಯಕ್, ಪೌರಾಯುಕ್ತರು, ಉಡುಪಿ ನಗರಸಭೆ.
Advertisement
ನಗರಸಭೆಯಿಂದ ಬೋರ್‌ವೆಲ್ ದುರಸ್ತಿಪ್ರತೀ ವರ್ಷ ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಬೇಸಗೆಯಲ್ಲಿ ನೀರಿನ ಅಭಾವ ಕಾಡುತ್ತದೆ. ಉಡುಪಿಯಲ್ಲಿ ಕಳೆದ 15, 20 ದಿನಗಳಿಂದ ನೀರಿಗೆ ಸಮಸ್ಯೆಯಾಗಿತ್ತು. ಈ ಬಗ್ಗೆ ನಗರಸಭೆ ಆಯುಕ್ತರ ಜತೆಗೆ ಮಾತುಕತೆ ನಡೆಸಿದ್ದು, ಠಾಣೆ ಸಮೀಪ ಇರುವ ಬೋರ್ ವೆಲ್‌ಅನ್ನು ನಗರಸಭೆ ವತಿಯಿಂದ ದುರಸ್ತಿಗೊಳಿಸಿದ್ದಾರೆ. ಈ ಜಲಮೂಲದಲ್ಲಿ ಕಾರ್ಯಚರಣೆಗೆ ಬೇಕಾದಷ್ಟು ನೀರು ಪ್ರಸ್ತುತ ಲಭ್ಯವಾಗುತ್ತಿದೆ.
-ವಸಂತ್‌ಕುಮಾರ್, ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ. ಅವಿನ್ ಶೆಟ್ಟಿ