Advertisement

ಚರ್ಚ್‌ನಲ್ಲಿ ಬೆಂಕಿ ಅವಘಡ: 41 ಮಂದಿ ಸಜೀವ ದಹನ

06:04 PM Aug 14, 2022 | Team Udayavani |

ಕೈರೋ: ಭೀಕರ ಅಗ್ನಿ ಅವಘಡ ಸಂಭವಿಸಿ, ಕನಿಷ್ಠ 41 ಜನರು ಸಜೀವ ದಹನಹಗೊಂಡಿದ್ದು, 55ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೈರೋ ಈಜಿಪ್ಟ್‌ನ ಕಾಪ್ಟಿಕ್ ಚರ್ಚ್‌ನಲ್ಲಿ ಸಂಭವಿಸಿದೆ.

Advertisement

ಇಂಬಾಬಾದ ಜನನಿಬಿಡ ಅಬು ಸೆಫೀನ್ ಎಂಬ ಚರ್ಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅವಘಡ ಸಂಭವಿಸಿದ್ದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: ಒಂದೇ ಕುಟುಂಬದ ನಾಲ್ವರು ಸೇರಿ ಜೈಲಿನ 10 ಕೈದಿಗಳ ಬಿಡುಗಡೆ

ಇಲ್ಲಿನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸ್ಸಿ ಅವರು ಕಾಪ್ಟಿಕ್ ಕ್ರಿಶ್ಚಿಯನ್ ಪೋಪ್ ತವಾಡ್ರೊಸ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next