ಅಡ್ಯನಡ್ಕ: ಕೊಲ್ಲಪದವು ಶ್ರೀ ವಿಷ್ಣುಮೂರ್ತಿ ಕೆಂಡ ಸೇವೆ ಕಟ್ಟೆ ಮತ್ತು ಸಮೀಪದಲ್ಲಿದ್ದ ಗೋಮಾಳದ ಜಾಗಕ್ಕೆ ಕಿಡಿಗೇಡಿಗಳು ಇಂದು ಬೆಂಕಿ ಹಾಕಿರುವ ಘಟನೆ ವರದಿಯಾಗಿದೆ.
ಬಿರುಬಿಸಿಲಿನ ಹೊತ್ತಲ್ಲಿ ಹಾಕಲಾಗಿದ್ದ ಈ ಬೆಂಕಿ ಸಮೀಪದಲ್ಲಿದ್ದ ಮನೆಗಳಿಗೆ ಮತ್ತು ರಬ್ಬರ್ ತೋಟಕ್ಕೆ ಹರಡುವುದನ್ನು ಸ್ಥಳೀಯರು ಸೇರಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಹಿತಿ ಪಡೆದ ತಕ್ಷಣ ಬಿ.ಸಿ.ರೋಡ್ ನಿಂದ ತರಿಸಲಾದ ಅಗ್ನಿಶಾಮಕ ದಳದ ವಾಹನದ ಜೊತೆ ಆಗಮಿಸಿದ ವಿಟ್ಲ ಆರಕ್ಷಕ ಠಾಣಾ ಸಿಬಂದಿಗಳು ಹಬ್ಬುತ್ತಿದ್ದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು.
ಇಲ್ಲಿರುವ ಗೋಮಾಳದ ಪ್ರದೇಶಕ್ಕೆ ಕಿಡಿಗೇಡಿಗಳು ಪ್ರತೀ ವರ್ಷ ಬೆಂಕಿ ಹಾಕುತ್ತಲೇ ಬರುತ್ತಿದ್ದು ಇವರ ಈ ಕೃತ್ಯಕ್ಕೆ ಸ್ಥಳೀಯಾಡಳಿತ ಮತ್ತು ಪೊಲೀಸರು ತಡೆ ಹಾಕಬೇಕು ಎಂದು ಸಾರ್ವಜನಿಕರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಕೋವಿಡ್ 19 ವೈರಸ್ ಹಬ್ಬುವಿಕೆ ಮುಂಜಾಗರೂಕತೆಯ ಕಾರಣ ಲಾಕ್ ಡೌನ್ ಪರಿಸ್ಥಿತಿ ಇದ್ದರೂ ಸ್ಥಳೀಯರು ಸಕಾಲದಲ್ಲಿ ಬೆಂಕಿ ನಂದಿಸುವಲ್ಲಿ ಮುಂದಾಗುವ ಮೂಲಕ ಸಮಯಪ್ರಜ್ಞೆಯನ್ನು ಮೆರೆದರು.