Advertisement

ಸೋಲಾರ್‌ ಪಾರ್ಕ್‌ನಲ್ಲಿ ಅಗ್ನಿ ಅವಘಡ

04:54 PM Feb 08, 2021 | Team Udayavani |

ಪಾವಗಡ: ತಾಲೂಕಿನ ಏಷ್ಯಾ ಖಂಡದ ಅತಿ ದೊಡ್ಡ ಸೋಲಾರ್‌ ಪಾರ್ಕ್‌ನ ತಿರುಮಣಿ ಗ್ರಾ.ಪಂ.ವ್ಯಾಪ್ತಿಯ ಅಚ್ಚಮ್ಮನಹಳ್ಳಿ ಗ್ರಾಮದ ಹತ್ತಿರ ಇರುವ ಬ್ಲಾಕ್‌ ನಂಬರ್‌ 37 ರಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಅವಘಡ ನಡೆದಿದೆ.

Advertisement

ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ಸೋಲಾರ್‌ ಪ್ಯಾನಲ್‌, ಮತ್ತಿತರ ಪರಿಕರಗಳು, ಬೈಕ್‌,  ಕಾರ್‌ ಸೇರಿ ಹಲವು ಉಪಕರಣಗಳು ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ಇದುವರೆಗೂ ತಿಳಿದು ಬಂದಿಲ್ಲ.

ಇದನ್ನೂ ಓದಿ :ಮಂತ್ರಿ ಪದವಿ ಮತ್ತು ಬೀಗದ ರಹಸ್ಯ

ಸ್ಥಳಕ್ಕೆ ಸಿಪಿಐ ವೆಂಕಟೇಶ್‌, ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next