ಬೆಳ್ಮಣ್: ಅಗ್ನಿ ಅವಗಢ ಸಂಭವಿಸಿ ಆಭರಣಗಳ ಪೆಟ್ಟಿಗೆ ಉತ್ಪಾದನಾ ಘಟಕವೊಂದು ಬೆಂಕಿಗಾಹುತಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಂಡ್ಕೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮುಂಡ್ಕೂರು ಗ್ರಾಮ ಪಂಚಾಯತ್ ರಸ್ತೆಯ ಮಾರ್ಕೆಟ್ ಕಟ್ಟಡ ಬಳಿಯ ಮೆ.ಸ್ವಾತಿ ಪ್ರೊಸೆಸರ್ಸ್ ಎಂಬ ಆಭರಣಗಳ ಪೆಟ್ಟಿಗೆಗಳ ಉತ್ಪಾದನಾ ಘಟಕ ಬೆಂಕಿಗಾಹುತಿಯಾಗಿದೆ.
ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯೆ ಸ್ವಾತಿ ಸುಧೀರ್ ಶೆಣೈ ಮಾಲಕತ್ವದ ಈ ಘಟಕದಲ್ಲಿ ಕೋವಿಡ್-19 ಲಾಕ್ ಡೌನ್ ಕಾರಣದಿಂದ ಮಾರಾಟವಾಗದೇ ಉಳಿದಿದ್ದ ಸಿದ್ದ ವಸ್ತುಗಳು,ಕಚ್ಚಾ ವಸ್ತುಗಳು ಇದ್ದವು. ಬೆಂಕಿಯ ಕೆನ್ನಾಲಿಗೆಗೆ ಇವುಗಳೊಂದಿಗೆ ಸಂಸ್ಥೆಯ ಕಂಪ್ಯೂಟರ್ ಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಸುಮಾರು 15 ಲಕ್ಷ ರೂ. ಮೌಲ್ಯದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿನ ನಂದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಮಕರಣಿಕರು, ಗ್ರಾಮಸ್ಥರು ಸೇರಿದ್ದರು. ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.