ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರಚೋದನಕಾರಿ ಭಾಷಣದ ಆರೋಪದಡಿ ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಎಫ್ ಐಅರ್ ದಾಖಲಾಗಿದೆ.
ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಕುಮಾರ್ ಶೆಟ್ಟಿ ದೂರಿನ ಮೇಲೆ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಎಫ್ ಐಅರ್ ದಾಖಲಾಗಿದೆ.
ಕೊಪ್ಪಳದಲ್ಲಿ ಕರ್ನಾಟಕ ಹೊತ್ತಿ ಹೊರಿಯುತ್ತೆ ಎಂದು ಯು.ಟಿ ಖಾದರ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಇದೇ ಮಂಗಳೂರು ಗಲಭೆಗೆ ಪುಮುಖ ಕಾರಣ ಎಂದು ದೂರಿನಲ್ಲಿ ಹೇಳಲಾಗಿದೆ.
ಪೌರತ್ವ ಕಾಯ್ದೆ ವಿರೋಧಿಸಿ ಅಸ್ಸಾಂ, ಪಶ್ಚಿಮ ಬಂಗಾಳ, ದೆಹಲಿ ಸೇರಿ ಉತ್ತರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆದಿದ್ದವು. ಈ ಕಿಚ್ಚು ಕರ್ನಾಟಕಕ್ಕೂ ಹಬ್ಬಿತ್ತು. ಈ ವೇಳೆ ಮಾತನಾಡಿದ್ದ ಯು.ಟಿ. ಖಾದರ್, ಸಿಎಎ ಜಾರಿಯಾದರೆ, ರಾಜ್ಯ ಹೊತ್ತಿ ಉರಿಯಲಿದೆ ಎಂದಿದ್ದರು.
ಈ ಹಿಂದೆ ಉಳ್ಳಾಲ ಠಾಣೆಯಲ್ಲೂ ಯು.ಟಿ ಖಾದರ್ ವಿರುದ್ಧ ಎಫ್ ಐಅರ್ ದೂರು ದಾಖಲಾಗಿತ್ತು.