Advertisement

ಪಾಕ್‌ ನೌಕಾ ಸಿಬ್ಬಂದಿ ವಿರುದ್ಧ ಎಫ್ಐಆರ್‌ ದಾಖಲಿಸಿದ ಗುಜರಾತ್ ಪೊಲೀಸ್

08:14 PM Oct 09, 2022 | Team Udayavani |

ಪೋರಬಂದರ್‌: ಗುಜರಾತ್‌ ಕರಾವಳಿಯ ಅರಬ್ಬೀ ಸಮುದ್ರದಲ್ಲಿ 7 ಮಂದಿ ಭಾರತೀಯ ಮೀನುಗಾರರ ಅಪಹರಣ ಮತ್ತು ಕೊಲೆ ಯತ್ನ ಸಂಬಂಧ ಪಾಕ್‌ ನೌಕಾಪಡೆಯ 20ರಿಂದ 25 ಸಿಬ್ಬಂದಿ ವಿರುದ್ಧ ಗುಜರಾತ್‌ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ.

Advertisement

ಅ.6ರಂದು ಸಂಜೆ “ಹರಸಿದ್ಧಿ’ ಎಂಬ ಹಡಗಿನಲ್ಲಿ ಜಕೌ ಕರಾವಳಿಯ ಭಾರತೀಯ ಜಲಪ್ರದೇಶದಲ್ಲಿ ಏಳು ಮಂದಿ ಭಾರತೀಯರು ಮೀನು ಹಿಡಿಯುತ್ತಿದ್ದರು. ಈ ವೇಳೆ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆಗೆ ಸೇರಿದ “ಪಿಎಂಎಸ್‌ಎ ಬರ್ಕತ್‌ 1060′ ಹಡಗಿನಲ್ಲಿ ಬಂದ 25 ಮಂದಿ ಪಾಕ್‌ ನೌಕಾಪಡೆ ಸಿಬ್ಬಂದಿ ಏಕಾಏಕಿ ಭಾರತೀಯ ಬೆಸ್ತರ ದೋಣಿ ಮೇಲೆ ಗುಂಡಿನ ಮಳೆಗರೆದಿದ್ದಾರೆ.

ಇದರಿಂದ ಹಡುಗು ಸಮುದ್ರದಲ್ಲಿ ಮುಳುಗಿದೆ. ಮೀನುಗಾರರನ್ನು ಅಪಹರಿಸಿ, ಅವರನ್ನು ಥಳಿಸಿ, ನಂತರ ಬಿಡುಗಡೆಗೊಳಿಸಿದ್ದಾರೆ. ಭಾರತೀಯ ಕರಾವಳಿ ಪಡೆ ಅವರನ್ನು ರಕ್ಷಿಸಿ ಜಕೌ ಬಂದರಿಗೆ ಕರೆತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next