Advertisement

ಬೆದರಿಕೆಯೊಡ್ಡಿ ಅಪ್ರಾಪ್ರ ಬಾಲಕಿಯ ಅತ್ಯಾಚಾರ: ಪಾಕ್ ಕ್ರಿಕೆಟರ್ ವಿರುದ್ಧ ದೂರು ದಾಖಲು

03:02 PM Dec 21, 2021 | Team Udayavani |

ಇಸ್ಲಮಾಬಾದ್: ಪಾಕಿಸ್ಥಾನದ ಕ್ರಿಕೆಟರ್ ಯಾಸಿರ್ ಶಾ ವಿರುದ್ಧ ಅಪ್ರಾಪ್ತ ವಯಸ್ಕ ಬಾಲಕಿಯ ಅತ್ಯಾಚಾರಕ್ಕೆ ಸಹಾಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿದೆ. ಇಸ್ಲಮಾಬಾದ್ ನ ಶಾಲಿಮಾರ್ ಪೊಲೀಸ್ ಠಾಣೆಯಲ್ಲಿ ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಯಾಸಿರ್ ಶಾ ಸ್ನೇಹಿತ ಫರ್ಹಾನ್ ತನ್ನ ಮೇಲೆ ಬಂದೂಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು 14 ವರ್ಷದ ಬಾಲಕಿ ಹೇಳಿದ್ದಾಳೆ ಎಂದು ಪಾಕ್ ಸುದ್ದಿ ವಾಹಿನಿ ವರದಿ ಮಾಡಿದೆ. ಘಟನೆಯ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ನೀಡಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯಾಸಿರ್ ಶಾ ಎಚ್ಚರಿಸಿದ್ದಾಗಿ ಬಾಲಕಿ ಹೇಳಿದ್ದಾಳೆ. ಈ ಬಗ್ಗೆ ಎಫ್ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ:21ನೇ ಶತಮಾನ ಈ ಆಟಗಾರನಿಗೆ ಸಲ್ಲುತ್ತದೆ..: ಹಾಡಿ ಹೊಗಳಿದ ವಾಸಿಂ ಅಕ್ರಮ್

“ಯಾಸಿರ್ ಶಾ ತಾನು ಅತ್ಯಂತ ಪ್ರಭಾವಿ ವ್ಯಕ್ತಿ ಮತ್ತು ತನಗೆ ಉನ್ನತ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿದ್ದಾರೆ. ಯಾಸಿರ್ ಶಾ ಮತ್ತು ಫರ್ಹಾನ್ ಅಪ್ರಾಪ್ತ ಬಾಲಕಿಯರನ್ನು ಅತ್ಯಾಚಾರ ಮಾಡುತ್ತಾರೆ ಮತ್ತು ವೀಡಿಯೊಗಳನ್ನು ಮಾಡುತ್ತಾರೆ ” ಎಂದು ಬಾಲಕಿ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ನೀಡಿದೆ.

Advertisement

ಯಾಸಿರ್ ಶಾ ಪಾಕಿಸ್ಥಾನದ ಪರ 46 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, 235 ವಿಕೆಟ್ ಗಳನ್ನು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next