ಬೆಂಗಳೂರು: ನೋಟುಗಳ ಬದಲಾವಣೆ ದಂಧೆಯಲ್ಲಿ ಬಂಧನಕ್ಕೊಳ ಗಾಗಿರುವ ನಾಗರಾಜ್‌ನ ಪರ ಈ ಹಿಂದೆ ವಕಾಲತ್ತು ವಹಿಸಿದ್ದ ವಕೀಲ ಶ್ರೀರಾಮರೆಡ್ಡಿ ವಿರುದ್ಧ ಪೊಲೀಸರು ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ ಕುರಿತು ಮೇ.11ರಂದು ಎಫ್ಐಆರ್ ದಾಖಲಾಗಿದೆ.
ನಾಗರಾಜ್‌ನ ಬಂಧನಕ್ಕೂ ಮೊದಲು ಮೇ.8ರಂದು ವಕೀಲ ಶ್ರೀರಾಮರೆಡ್ಡಿ ಪ್ರಕರಣದ ತನಿಖಾಧಿಕಾರಿ ರವಿಕುಮಾರ್ ಅವರನ್ನು ಭೇಟಿಯಾಗಿದ್ದರು. ನಾಗರಾಜನನ್ನು ಕೋರ್ಟ್‌ನ ಮಾರ್ಗಸೂಚಿಯಂತೆ ವಿಚಾರಣೆ ನಡೆಸಬೇಕು, ಕೆಲ ಪ್ರಕ ರಣಗಳಿಂದ ಅತನನ್ನು ಕೈಬಿಡಬೇಕು ಎಂದು ಷರತ್ತು ಹಾಕಿದ್ದರು.
ಷರತ್ತು ಗಳನ್ನು ನಿರಾಕರಿಸಿದ ರವಿಕುಮಾರ್ ಅವರಿಗೆ “ನಿಮ್ಮನ್ನು ಕೋರ್ಟ್ ಮುಂದೆ ನಿಲ್ಲಿಸುತ್ತೇನೆ,’ ಎಂದು ರೆಡ್ಡಿ ಬೆದರಿಕೆ ಹಾಕಿದ್ದರು. ವಿಡಿಯೋ ಬಿಡುಗೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್‌ನ ಅನುಮತಿ ಪಡೆದು ಶ್ರೀರಾಮರೆಡ್ಡಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮತ್ತೂಂದೆಡೆ ನಾಗರಾಜ್ ಕೂಡ ಎರಡು ಬಾರಿ ವಿಡಿಯೋ ಚಿತ್ರೀಕರಿ ಸಲು ವಕೀಲ ಶ್ರೀರಾಮರೆಡ್ಡಿ ಅವರೇ ಕಾರಣ. 2ನೇ ವಿಡಿಯೋ ಬಿಡುಗಡೆ ಮಾಡದ್ದಂತೆ ಮನವಿ ಮಾಡಿದರೂ ಕೇಳದೆ ವೈಯಕ್ತಿಕ ಕಾರಣಕ್ಕೆ ವಿಡಿಯೋ ಬಿಡುಗಡೆ ಮಾಡಿ ನನ್ನನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ನಾಗರಾಜು ಪೊಲೀಸರಿಗೆ ಹೇಳಿಕೆ ನೀಡಿದ್ದು, ಇದನ್ನು ಪೊಲೀ ಸರು ವಿಡಿಯೋ ರೆಕಾರ್ಡ್ ಮಾಡಿ ಕೊಂಡಿದ್ದಾರೆ.
ಈ ರೀತಿ ವಿಡಿಯೋ ಗಳ ಮೂಲಕ ಕೆಲ ಮುಖಂಡರ ತೇಜೋವಧೆಗೆ ಪ್ರೇರಣೆ ನೀಡಿರುವುದರಿಂದ ಶ್ರೀರಾಮರೆಡ್ಡಿ ವಿರುದ್ಧ ಎಫ್ಐಆರ್ ದಾಖಲಿಸುವ ಸಾಧ್ಯತೆ ಗಳಿದ್ದು, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಯುತ್ತಿದೆ ಎಂದು ಪ್ರಕರಣದ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋಕಾ, ಗೂಂಡಾ ಕಾಯ್ದೆ?: ಬ್ಲ್ಯಾಕ್ ಆ್ಯಂಡ್ ವೈಟ್ ಪ್ರಕರಣ ಸಂಬಂಧ ನಾಗರಾಜ್, ಈತನ ಮಕ್ಕಳಾದ ಗಾಂಧಿ, ಶಾಸ್ತ್ರೀ ಮತ್ತು ಸಹಚರರ ವಿರುದ್ಧ ಗೂಂಡಾ ಅಥವಾ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿ ಸುವ ಸಾಧ್ಯತೆಯಿದೆ. ಏಕೆಂದರೆ, ಇದೊಂದು ಸಂಘಟಿತ ಅಪರಾಧ. ವಂಚನೆ ಮಾಡುವ ಉದ್ದೇಶದಿಂದಲೇ ಎಲ್ಲ ಆರೋಪಿಗಳು ಒಂದೆಡೆ ಕುಳಿತು ಸಂಚು ರೂಪಿಸಿ ಕೃತ್ಯವೆಸಗಿದ್ದಾರೆ.
ಆದರೆ, ಹೆಣ್ಣೂರು ಠಾಣೆಯಲ್ಲಿ ಆರೋಪಿಗಳ ವಿರುದ್ಧ ದಾಖಲಾಗಿ ರುವುದು ಒಂದೇ ಒಂದು ಪ್ರಕರಣ. ಇನ್ನುಳಿದ್ದಂತೆ ಶ್ರೀರಾಮಪುರ ಠಾಣೆ ಯಲ್ಲಿ 3-4 ಪ್ರಕರಣಗಳು ದಾಖಲಾ ಗಿವೆ. ಹಾಗಾಗಿ ಶ್ರೀರಾಮಪುರ ಠಾಣೆ ಪೊಲೀಸರು, ಆರೋಪಿಗಳ ವಿರುದ್ಧ ಸೂಕ್ತ ಸಾûಾ$Âಧಾರಗಳನ್ನು ಸಂಗ್ರಹಿಸಿ, ಕೋಕಾ ಅಥವಾ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.