Advertisement

ಜನಪ್ರಿಯ ಕಪಿಲ್ ಶರ್ಮಾ ಕಾರ್ಯಕ್ರಮದ ವಿರುದ್ಧ ಎಫ್‍ಐಆರ್

03:04 PM Sep 24, 2021 | Team Udayavani |

ಮುಂಬೈ : ಹಿಂದಿಯ ಜನಪ್ರಿಯ ಕಾರ್ಯಕ್ರಮ ‘ಕಪಿಲ್ ಶರ್ಮಾ’ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮಕ್ಕೆ ಇದೀಗ ಕಾನೂನಿನ ಕಂಟಕ ಎದುರಾಗಿದೆ.

Advertisement

ನ್ಯಾಯಾಲಯದಲ್ಲಿ ಮದ್ಯಪಾನ ಮಾಡುವ ದೃಶ್ಯವೊಂದನ್ನು ಕಪಿಲ್ ಶರ್ಮಾ ಶೋನಲ್ಲಿ ಸೃಷ್ಟಿಸಿ ಟಿವಿಯಲ್ಲಿ ಪ್ರಸಾರ ಮಾಡಿದ ಹಿನ್ನೆಲೆ ಮಧ್ಯಪ್ರದೇಶದ ಶಿವಪುರಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರೊಬ್ಬರು ಈ ಕಾರ್ಯಕ್ರಮದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಕಾರ್ಯಕ್ರಮದಲ್ಲಿ ನ್ಯಾಯಾಲಯದ ದೃಶ್ಯವೊಂದರಲ್ಲಿ ನಟರು ಮದ್ಯಪಾನ ಮಾಡುತ್ತಿದ್ದ ದೃಶ್ಯ ಚಿತ್ರೀಕರಿಸಲಾಗಿತ್ತು. ಇದು 2020ರ ಜನವರಿ 19 ರಂದು ಪ್ರಸಾರಗೊಂಡಿತ್ತು. ಈ ವರ್ಷದ ಏಪ್ರಿಲ್ 24ರಂದು ಮರು ಪ್ರಸಾರ ಮಾಡಲಾಗಿತ್ತು. ಈ ದೃಶ್ಯದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ವಕೀಲರು, ನ್ಯಾಯಾಲಯದಲ್ಲಿ ಮದ್ಯ ಸೇವನೆಯಂತಹ ದೃಶ್ಯವನ್ನು ಸೃಷ್ಟಿಸಿದ್ದು ತಪ್ಪು. ಇದು ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನ. ಈ ದೃಶ್ಯದ ಮೂಲಕ ನ್ಯಾಯಲಯದ ಘನತೆಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಪಿಲ್ ಶರ್ಮಾ ಮೊದಲಿನಿಂದಲೂ ಇಂತಹದೆ ತಪ್ಪುಗಳನ್ನು ಮಾಡುತ್ತ ಬಂದಿದೆ. ಮಹಿಳೆಯ ಬಗ್ಗೆ ಕೀಳು ಮಟ್ಟದ ಮಾತುಗಳು, ಡಬಲ್ ಮೀನಿಂಗ್ ಮಾತುಗಳ ಮೂಲಕ ನೋಡುಗರಲ್ಲಿ ಅಸಹ್ಯ ಹುಟ್ಟಿಸುತ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ.

ಇನ್ನು ಈ ಅರ್ಜಿಯ ವಿಚಾರಣೆ ಅಕ್ಟೋಬರ್ 1 ರಂದು ವಿಚಾರಣೆಗೆ ಬರಲಿದ್ದು, ಕಪಿಲ್ ಶರ್ಮಾ ಶೋ ನಿರ್ಮಾಪಕರು ನ್ಯಾಯಾಲಯದ ಮುಂದೆ ಹಾಜರಾಗಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next