Advertisement

ಶಮಿ ವಿರುದ್ಧ ಪತ್ನಿಯ ದೂರು

07:30 AM Mar 10, 2018 | |

ಕೋಲ್ಕತಾ: ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಶಮಿ ವಿರುದ್ಧ ದೈಹಿಕ ಹಿಂಸೆ, ಮಾನಸಿಕ ಕಿರುಕುಳ, ದಾಂಪತ್ಯ ದ್ರೋಹದ ದೂರನ್ನು ಅವರ ಪತ್ನಿ ಹಸಿನ್‌ ಜಹಾನ್‌ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ಜಾಮೀನು ಸಹಿತ ಮತ್ತು ಜಾಮೀನು ರಹಿತ ಪ್ರಕರಣವು ಜಾದವ್‌ಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ ಎಂದು ಕೋಲ್ಕತಾ ಪೊಲೀಸ್‌ನ ಜಂಟಿ ಸಿಪಿ ಪ್ರವೀಣ್‌ ತ್ರಿಪಾಠಿ ಅವರು ಹೇಳಿದ್ದಾರೆ. 

Advertisement

ಕುಟುಂಬದ ನಾಲ್ವರ ಹೆಸರನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ ಪತ್ನಿಯ ಆರೋಪವನ್ನು ಶಮಿ ತಳ್ಳಿಹಾಕಿದ್ದಾರೆ. ಇದು ಸುಳ್ಳು ಮತ್ತು ನನ್ನ ಹೆಸರಿಗೆ ಮಸಿ ಬಳಿಯಲು ಮಾಡಿದ ಪಿತೂರಿ ಎಂದು ಶಮಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ.

ಹಸಿನ್‌ ಗುರುವಾರ ಶಮಿ ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ, ಅವರು ಇಂಗ್ಲೆಂಡ್‌ ಮೂಲದ ಉದ್ಯಮಿಯಿಂದ ಹಣ ಸ್ವೀಕರಿಸಿದ್ದಾರೆ, ಇದಕ್ಕೆ ನನ್ನ ಬಳಿ ದಾಖಲೆಯಿದೆ ಎಂದು ಹೇಳಿದ್ದರು. ಮಾತ್ರವಲ್ಲದೇ ಮೊಹಮ್ಮದ್‌ ಶಮಿಗೆ ಪಾಕಿಸ್ಥಾನ ಮೂಲದ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಕಿಡಿಕಾರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next