ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ಸಂಜೆ 5 ಗಂಟೆಗೇ ತೆರೆ ಬಿದ್ದಿದ್ದರೂ, ನಿಯಮ ಉಲ್ಲಂಘಿಸಿ ಶನಿವಾರವೂ ಪ್ರಚಾರ ಕೈಗೊಂಡ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ರತ್ಲಂ ಕ್ಷೇತ್ರದ ಹಾಲಿ ಸಂಸದ ಕಾಂತಿಲಾಲ್ ಭೂರಿಯಾ ಹಾಗೂ ಮಧ್ಯಪ್ರದೇಶ ಸಂಪುಟ ಸಚಿವ ಸುರೇಂದ್ರ ಸಿಂಗ್‌ಹನಿ ಬಘೇಲ್ ಅವರೇ ನೀತಿ ಸಂಹಿತೆಯನ್ನು ಗಾಳಿಗೆ ತೂರಿದ ನಾಯಕರು. ಈ ಇಬ್ಬರಲ್ಲದೆ ಎಫ್ಐಆರ್‌ನಲ್ಲಿ ಶಾಸಕ ಮುಕೇಶ್ ಪಟೇಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಪಟೇಲ್ ಮತ್ತು ಅಲಿರಾಜ್‌ಪುರ ನಗರ ಪಾಲಿಕೆ ಅಧ್ಯಕ್ಷ ಸೇನಾ ಪಟೇಲ್ ಹೆಸರನ್ನೂ ಸೇರಿಸಲಾಗಿದೆ.
ಸನ್ನಿ ದೇವಲ್ಗೆ ಇಸಿ ನೋಟಿಸ್
ಪಂಜಾಬ್‌ನ ಗುರುದಾಸ್‌ಪುರ ಬಿಜೆಪಿ ಅಭ್ಯರ್ಥಿ ಸನ್ನಿ ದೇವಲ್ಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಶುಕ್ರವಾರ ಬಹಿರಂಗ ಪ್ರಚಾರ ಅಂತ್ಯವಾದ ಬಳಿಕವೂ ಪ್ರಚಾರ ಮುಂದುವರಿಸಿದ್ದರು. ಜೊತೆಗೆ ಧ್ವನಿವರ್ಧಕಗಳನ್ನೂ ಬಳಸಿದ್ದರು.

Advertisement