Advertisement

ನಟಿ ಶ್ರುತಿ ಹರಿಹರನ್‌ ವಿರುದ್ಧ ಎಫ್ಐಆರ್‌

12:30 PM Oct 26, 2018 | Team Udayavani |

ಬೆಂಗಳೂರು: ನಟ ಅರ್ಜುನ್‌ ಸರ್ಜಾ ಅವರ ವೈಯಕ್ತಿಕ ಮಾಹಿತಿ ಬಳಸಿ ಫೇಸ್‌ಬುಕ್‌ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದಾರೆ ಎಂಬ ಆರೋಪ ಸಂಬಂಧ ನಟಿ ಶ್ರುತಿಹರಿಹರನ್‌ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಗುರುವಾರ ಎಫ್ಐಆರ್‌ ದಾಖಲಾಗಿದೆ.

Advertisement

ಈ ಕುರಿತು ಶ್ರೀರಾಂ ಫಿಲಂ ಇಂಟರ್‌ನ್ಯಾಶನಲ್‌ ಸಂಸ್ಥೆಯ ಶಿವ ಅರ್ಜುನ್‌ ಸರ್ಜಾ ಅವರು ನೀಡಿದ ದೂರಿನ ಅನ್ವಯ ಶ್ರುತಿ ಹರಿಹರನ್‌ ಸೇರಿ ಮತ್ತಿತರರ ವಿರುದ್ಧ ವಂಚನೆ, ಮಾನಹಾನಿ ಆರೋಪ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಶ್ರುತಿ ಹರಿಹರನ್‌ ಸೇರಿ ಮತ್ತಿತರರು ಒಳಸಂಚು ರೂಪಿಸಿ ಅರ್ಜುನ್‌ ಸರ್ಜಾ ಹಾಗೂ ಅವರ ಕುಟುಂಬದವರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಜತೆಗೆ, ಅಧಿಕ ಮೊತ್ತದ ಹಣ ಪಡೆಯಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next