Advertisement

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

11:20 AM Nov 06, 2024 | Team Udayavani |

ಬೆಂಗಳೂರು: ದೀಪಾವಳಿ ಹಬ್ಬದಂದು ಅತಿಯಾದ ಪಟಾಕಿ ಸಿಡಿಸಿರುವ ಪರಿಣಾಮ ರಾಜ್ಯಾದ್ಯಂತ ಮಾಲಿನ್ಯ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬರೋಬ್ಬರಿ 120ಕ್ಕೆ ಏರಿಕೆಯಾಗಿದೆ. ಆದರೆ, 2023ರ ದೀಪಾವಳಿ ಪಟಾಕಿ ಮಾಲಿನ್ಯಕ್ಕೆ ಹೋಲಿಸಿದರೆ ಈ ಬಾರಿ ಶೇ.34.5ರಷ್ಟು ಮಾಲಿನ್ಯ ಪ್ರಮಾಣ ಕಡಿಮೆಯಿದೆ ಎಂಬ ಅಂಶವು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಪರಿಶೀಲನೆ ವೇಳೆ ಕಂಡು ಬಂದಿದೆ.

Advertisement

ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಪಟಾಕಿ ಮಾಲಿನ್ಯ ಅತ್ಯಧಿಕವಾಗಿದ್ದರೆ, ಇನ್ನು ಕೆಲ ಜಿಲ್ಲೆಗಳಲ್ಲಿ ಮಾಲಿನ್ಯ ಪ್ರಮಾಣ ಸಾಮಾನ್ಯವಾಗಿತ್ತು. ದೀಪಾವಳಿ ಹಬ್ಬದಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಬಗ್ಗೆ ಮೇಲ್ವಿಚಾರಣೆ ನಡೆಸಿದೆ. ಅದರ ಪ್ರಕಾರ ಬೆಂಗಳೂರಿನಲ್ಲಿ 120 ಎಕ್ಯೂಐ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತ್ಯಧಿಕವಾಗಿದೆ.

ಇನ್ನು ರಾಯಚೂರು 118, ಹಾವೇರಿ 110, ಹಾಸನ 106 ಎಕ್ಯೂಐ ವರದಿಯಾಗಿದ್ದು, ನಂತರದ ಸ್ಥಾನದಲ್ಲಿದೆ. ಕೊಡಗಿನಲ್ಲಿ ಅತೀ ಕಡಿಮೆ 31 ಎಕ್ಯೂಐ ದಾಖಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಎಕ್ಯೂಐ ಪ್ರಮಾಣ 100ರ ಗಡಿ ದಾಟಿಲ್ಲ. ಇನ್ನು 2023ರ ದೀಪಾವಳಿ ಸಂದರ್ಭದಲ್ಲಿ ರಾಜ್ಯದಲ್ಲಿ ಒಟ್ಟಾರೆ 111ರಷ್ಟಿದ್ದ ಎಕ್ಯೂಐ ಪ್ರಮಾಣವು 2024ರ ವೇಳೆಗೆ 73ಕ್ಕೆ (ಶೇ.34.5) ಇಳಿಕೆಯಾಗಿದೆ.

25 ಸ್ಥಳಗಳಲ್ಲಿ ಎಕ್ಯೂಐ ಇಳಿಕೆ: ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಜಿÇÉೆಗಳಲ್ಲಿ ನಿರಂತರ ಪರಿವೇಷ್ಠಕ ವಾಯು ಗುಣಮಟ್ಟ ಮಾಪನ ಕೇಂದ್ರಗಳಲ್ಲಿ ಮಾಪನ ಮಾಡಿರುವ 26 ಸ್ಥಳಗಳ ಪೈಕಿ 25 ಸ್ಥಳಗಳಲ್ಲಿ ಎಕ್ಯೂಐ ಸಾಕಷ್ಟು ಕಡಿಮೆ ಇದೆ. ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಉಳಿದ 30 ವಿಶೇಷ ಮಾಪನ ಕೇಂದ್ರಗಳಲ್ಲಿ ದಾಖಲಿಸಿರುವ ಶಬ್ದ ಗುಣಮಟ್ಟವು ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. 2024ರಲ್ಲಿ ಬೆಂಗಳೂರು ನಗರದಲ್ಲಿ ಹಾಗೂ ರಾಜ್ಯದ ಇತರೆ ನಗರಗಳಲ್ಲಿ ವಾಯು ಗುಣಮಟ್ಟ ಸಾಕಷ್ಟು ನಿಯಂತ್ರಣದಲ್ಲಿ ಇದೆ. ಮಂಡಳಿ ಕೈಗೊಂಡಿರುವ ಹಲವಾರು ಜಾಗೃತಿ ಕಾರ್ಯಕ್ರಮಗಳು ಹಾಗೂ ಹಸಿರು ಪಟಾಕಿಗಳನ್ನು ಬಳಸಲು ಉತ್ತೇಜನ ನೀಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿರುತ್ತದೆ ಎಂದು ಕೆಎಸ್‌ಪಿಸಿಬಿ ಮೇಲ್ವಿಚಾರಣೆ ವರದಿಯಲ್ಲಿ ತಿಳಿಸಿದೆ. ಇನ್ನು ಬೆಂಗಳೂರಿನಲ್ಲಿ ನಿರಂತರ ಪರಿವೇಷ್ಠಕ ವಾಯು ಗುಣಮಟ್ಟ ಮಾಪನ ಕೇಂದ್ರಗಳ ಮೂಲಕ ಮಾಪನ ಮಾಡಿರುವ ಒಟ್ಟು 11 ಸ್ಥಳಗಳ ಪೈಕಿ 7 ಸ್ಥಳಗಳಲ್ಲಿ ಎಕ್ಯೂಐ ಕಡಿಮೆ ಇದೆ. 9 ನಿರಂತರ ಶಬ್ದ ಗುಣಮಟ್ಟ ಮಾಪನ ಕೇಂದ್ರಗಳ ಪೈಕಿ 7 ಕೇಂದ್ರಗಳಲ್ಲಿ ಶಬ್ದ ಗುಣಮಟ್ಟ ತಗ್ಗಿರುವುದು ಕಂಡು ಬಂದಿದೆ.

ಎಕ್ಯೂಐ ಎಷ್ಟಿದ್ದರೆ ಉತ್ತಮ?: 0-50 ಎಕ್ಯೂಐ ಇದ್ದರೆ ಉತ್ತಮ. 51-100ರಷ್ಟಿದ್ದರೆ ತೃಪ್ತಿಕರವಾಗಿದೆ. 101 ರಿಂದ 200ರ ವರೆಗೆಗಿದ್ದರೆ ಮಧ್ಯಮ, 201-300ರಷ್ಟಿದ್ದರೆ ಕಳಪೆ ಗುಣಮಟ್ಟದ ವಾಯು ಮಾಲಿನ್ಯವಾಗಿದೆ. ಇದರಿಂದ ಉಸಿರಾಟದ ಸಮಸ್ಯೆ ಇರುವವರಿಗೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಇನ್ನು 301-400 ಎಕ್ಯೂಐ ಬಹಳಷ್ಟು ಕಳಪೆಗುಣಮಟ್ಟದ ವಾಯು ಮಾಲಿನ್ಯ ಸೂಚಿಸುತ್ತದೆ. ತೀವ್ರ ಕಳಪೆ ಗುಣಮಟ್ಟದ ವಾಯು ಮಾಲಿನ್ಯವಿದ್ದರೆ 401-500 ಎಕ್ಯೂಐಗೆ ಹೋಗುತ್ತದೆ. ಇದರಿಂದ ಅನಾರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಗಳಿರುತ್ತದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next