Advertisement

FIR : ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಜಾಹೀರಾತು; ವ್ಯಕ್ತಿ ವಿರುದ್ಧ ಎಫ್ಐಆರ್‌

09:58 AM Oct 29, 2024 | Team Udayavani |

ಬೆಂಗಳೂರು: ಪರವಾನಗಿ ನಿಯಮ ಉಲ್ಲಂ ಸಿ ಆನ್‌ ಲೈನ್‌ನಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಬಂಡೇಪಾಳ್ಯ ಪೊಲೀಸ್‌ ಠಾಣೆಯಲ್ಲಿ ಎಫ್ ಐಆರ್‌ ದಾಖಲಾಗಿದೆ. ಎಚ್‌ಎಸ್‌ಆರ್‌ ಲೇಔಟ್‌ನ ಶಿವಾನಂದ ಸ್ಟೋರ್‌ ಮಾಲಿಕ ಸುಪ್ರೀತ್‌ ವಿರುದ್ಧ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

ಆರೋಪಿ ಸುಪ್ರೀತ್‌ ವರ್ಷ ಪೂರ್ತಿ ಪಟಾಕಿ ಮಾರಾಟಕ್ಕೆ ಪರವಾನಗಿ ಪಡೆದುಕೊಂಡಿದ್ದಾರೆ. ಪರವಾನಗಿ ನಿಯಮದ ಪ್ರಕಾರ ಅಂಗಡಿಯಲ್ಲಿ ಮಾತ್ರ ಪಟಾಕಿ ಮಾರಾಟ ಮಾಡಬೇಕು. ಆದರೆ, ಸುಪ್ರೀತ್‌ ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದರು. ಆನ್‌ಲೈನ್‌ನಲ್ಲಿ ಪಟಾಕಿ ಬುಕ್‌ ಮಾಡಿದರೆ, ಮನೆ ಬಾಗಿಲಿಗೆ ಪಟಾಕಿ ತಂದು ಕೊಡುವುದಾಗಿ ತಿಳಿಸಿದ್ದರು. ಹೀಗಾಗಿ ಪರವಾನಗಿ ನಿಯಮ ಉಲ್ಲಂ ಸಿದ ಆರೋಪದಡಿ ಸುಪ್ರೀತ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next