Advertisement

ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ

07:48 PM Apr 21, 2021 | Team Udayavani |

ಹುಣಸೂರು : ಕೊವಿಡ್ ಮಾರ್ಗಸೂಚಿಯಂತೆ ಮಾಸ್ಕ್ ಧರಿಸದವರಿಗೆ ಹುಣಸೂರು ನಗರಸಭೆ ಅಧಿಕಾರಿಗಳು ಎರಡು ದಿನಗಳ ಅವಧಿಯಲ್ಲಿ 18,900 ಸಾವಿರ ರೂ ದಂಡ ವಿಧಿಸಿದ್ದಾರೆ.

Advertisement

ಸರಕಾರದ ನಿರ್ದೇಶನದಂತೆ ತಹಸೀಲ್ದಾರ್ ಬಸವರಾಜ್, ಪೌರಾಯುಕ್ತ ರಮೇಶ್ ನೇತೃತ್ವದಲ್ಲಿ ನಗರದ ಎಸ್.ಜೆ.ರಸ್ತೆ, ಜೆ.ಎಲ್.ಬಿ.ರಸ್ತೆ, ಬಜಾರ್ ರಸ್ತೆಗಳಲ್ಲಿ ತಪಾಸಣೆ ನಡೆಸಿ, ಮಾಸ್ಕ್ ಧರಿಸದ ಅಂಗಡಿ ಮಾಲಿಕರು, ವಾಹನ ಸವಾರರು, ಸಾರ್ವಜನಿಕರಿಗೆ ತಲಾ ನೂರು ರೂನಂತೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಕ ಮೋಹನ್, ಸತೀಶ್, ಪರಿಸರ ಇಂಜಿನಿಯರ್ ರೂಪ, ಎ.ಇ.ಇ.ಮಂಜುನಾಥ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : ಪದ್ಮಭೂಷಣ ಪುರಸ್ಕೃತ, ಬಂಗಾಳದ ಖ್ಯಾತ ಕವಿ ಶಂಖಾ ಘೋಷ್‌ ನಿಧನ

ಎರಡು ದಿನ ನಗರದಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ 17,900 ರೂ ದಂಡ ವಸೂಲಿ ಮಾಡಲಾಗಿದೆ. ಪ್ರತಿನಿತ್ಯ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡಸಲಿದ್ದು. ಮಾಸ್ಕ್ ಧರಿಸದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು  ಹಿರಿಯ ಆರೋಗ್ಯ ನಿರೀಕ್ಷಕ ಮೋಹನ್ ಎಚ್ಚರಿಸಿದ್ದಾರೆ.

Advertisement

ಕಳೆದ ಎರಡು ದಿನಗಳಲ್ಲಿ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ವೇಳೆ ಪ್ಲಾಸ್ಟಿಕ್ ಪತ್ತೆಯಾಗಿದ್ದು, ಮೊದಲ ಬಾರಿಗೆ ತಲಾ 100 ರೂ ನಂತೆ ಹತ್ತು ಅಂಗಡಿಗಳಿಗೆ ದಂಡ ವಿಧಿಸಲಾಗಿದೆ. ಮತ್ತೆ ಪ್ಲಾಸ್ಟಿಕ್ ಸಿಗುವ ಅಂಗಡಿಗಳಿಗೆ ಒಂದು ಸಾವಿರ ಮೂರಣೆ ಬಾರಿಗೆ ಕಾನೂಕು ಕ್ರಮ ಕೈಗೊಳ್ಳಲಾಗುವುದೆಂದು ಪರಿಸರ ಇಂಜಿನಿಯರ್ ರೂಪ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next