Advertisement

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

12:18 AM Apr 23, 2024 | Team Udayavani |

ಕೋಲ್ಕತಾ/ ಮುಲ್ಲಾನ್‌ಪುರ್‌: ಐಪಿಎಲ್‌ನ ರವಿವಾರದ ಪಂದ್ಯಗಳ ನಾಯಕರಾದ ಫಾ ಡು ಪ್ಲೆಸಿಸ್‌ ಮತ್ತು ಸ್ಯಾಮ್‌ ಕರನ್‌ ಅವರಿಗೆ ದಂಡದ ಬರೆ ಬಿದ್ದಿದೆ.

Advertisement

ಕೆಕೆಆರ್‌ ಎದುರಿನ ಪಂದ್ಯದ ವೇಳೆ ಓವರ್‌ ಗತಿ ಕಾಯ್ದುಕೊಳ್ಳಲು ವಿಫ‌ಲರಾದ ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು. ಈ ಕೂಟದಲ್ಲಿ ಆರ್‌ಸಿಬಿ ಓವರ್‌ ರೇಟ್‌ ಕಾಯ್ದುಕೊಳ್ಳದ ಮೊದಲ ನಿದರ್ಶನ ಇದಾಗಿದೆ.

ಗುಜರಾತ್‌ ಟೈಟಾನ್ಸ್‌ ಎದುರಿನ ಪಂದ್ಯದ ವೇಳೆ ಅಂಪಾಯರ್‌ ತೀರ್ಪಿನ ವಿರುದ್ಧ ಅಸಭ್ಯವಾಗಿ ವರ್ತಿಸಿದ ಕಾರಣಕ್ಕಾಗಿ ಪಂಜಾಬ್‌ ತಂಡದ ಉಸ್ತುವಾರಿ ನಾಯಕ ಸ್ಯಾಮ್‌ ಕರನ್‌ ಅವರಿಗೆ ಪಂದ್ಯದ ಸಂಭಾವನೆಯ ಶೇ. 50ರಷ್ಟು ದಂಡ ಹೇರಲಾಯಿತು.

ಅಂಪಾಯರ್‌ ಜತೆ ವಾಗ್ವಾದ
ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಮೈದಾನದ ಅಂಪಾಯರ್‌ಗಳ ಜತೆಗೆ ವಾಗ್ವಾದ ನಡೆಸಿದ ವಿರಾಟ್‌ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ. 50ರಷ್ಟು ದಂಡ ವಿಧಿಸಲಾಗಿದೆ.
ಆರ್‌ಸಿಬಿ ಇನ್ನಿಂಗ್ಸ್‌ನ 3ನೇ ಓವರ್‌ನಲ್ಲಿ ಹರ್ಷಿತ್‌ ರಾಣಾ ಅವರ ಫ‌ುಲ್‌ಟಾಸ್‌ ಎಸೆತಕ್ಕೆ ಕೊಹ್ಲಿ ಕಾಟ್‌ ಆ್ಯಂಡ್‌ ಬೌಲ್ಡ್‌ ಆದರು. ಡಿಆರ್‌ಎಸ್‌ ವೇಳೆಯೂ ಅದು ನೋ ಬಾಲ್‌ ಅಲ್ಲ, ಔಟ್‌ ಎಂದು ತೀರ್ಪು ನೀಡಲಾಯಿತು. ಇದು ಕೊಹ್ಲಿಯನ್ನು ಕೆರಳಿಸಿತ್ತು. ಆಗ ಅವರು ಅಂಪಾಯರ್‌ ಜತೆ ವಾಗ್ವಾದ ನಡೆಸಿದ್ದರು.

29 ಸಲ 200 ರನ್‌ ನೀಡಿದ ಆರ್‌ಸಿಬಿ!
ಸತತ ಸೋಲಿ ನಿಂದ ಕಂಗೆಟ್ಟಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಕೆಲವು ಬೇಡದ, ಅನಗತ್ಯ ದಾಖಲೆ ಗಳನ್ನು ಬರೆದು ಅವಮಾನಕ್ಕೆ ಒಳ ಗಾಗಿದೆ. ಕೆಕೆಆರ್‌ಗೆ 222 ರನ್‌ ಬಿಟ್ಟುಕೊಡುವ ಮೂಲಕ ಟಿ20 ಇತಿಹಾಸದಲ್ಲೇ ಎದುರಾಳಿಗೆ ಅತ್ಯಧಿಕ 29 ಸಲ 200 ಪ್ಲಸ್‌ ರನ್‌ ನೀಡಿದ ಅನಪೇಕ್ಷಿತ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಇಂಗ್ಲೆಂಡ್‌ನ‌ ಮಿಡ್ಲ್ಸೆಕ್ಸ್‌ ಕೌಂಟಿ ತಂಡ 28 ಸಲ ಎದುರಾಳಿಗೆ 200 ರನ್‌ ನೀಡಿದ್ದು ಈವರೆಗಿನ “ದಾಖಲೆ’ ಆಗಿತ್ತು. ಐಪಿಎಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ತಂಡ ಪಂಜಾಬ್‌ ಕಿಂಗ್ಸ್‌ (27). ಈ 29 ಸಂದರ್ಭಗಳಲ್ಲಿ ಆರ್‌ಸಿಬಿ 23 ಪಂದ್ಯಗಳಲ್ಲಿ ಸೋಲನು ಭವಿಸಿದೆ. ಕೇವಲ ಐದನ್ನಷ್ಟೇ ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ.

Advertisement

ಸಿಕ್ಸರ್‌ ಹೊಡೆದರೂ ಸಿಕ್ಕಿದ್ದು ನಾಲ್ಕೇ ರನ್‌!
ಕೆಕೆಆರ್‌-ಆರ್‌ಸಿಬಿ ನಡುವಿನ ಪಂದ್ಯ ವಿವಾದದಿಂದಲೂ ಸುದ್ದಿಯಾಗಿದೆ. ವಿರಾಟ್‌ ಕೊಹ್ಲಿ ನೋಬಾಲ್‌ ವಿವಾದದ ಕಿಡಿ ಹೊತ್ತಿಸಿದ ಬೆನ್ನಲ್ಲೇ, ಆರ್‌ಸಿಬಿ ಬ್ಯಾಟರ್‌ ಸುಯಶ್‌ ಪ್ರಭುದೇಸಾಯಿ ಸಿಕ್ಸರ್‌ ಬಾರಿಸಿದ್ದರೂ ಅಂಪಾಯರ್‌ ಅದನ್ನು ಬೌಂಡರಿ ಎಂದು ಪರಿಗಣಿಸಿದ್ದೇ ತಂಡದ ಸೋಲಿಗೆ ಕಾರಣ ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ಜಾಲತಾಣದಲ್ಲಿ ಈ ಕುರಿತು ಚಿತ್ರ, ವೀಡಿಯೋಗಳು ವೈರಲ್‌ ಆಗಿವೆ.

ಪ್ರಭುದೇಸಾಯ್‌ ಸಿಕ್ಸರ್‌ ಬಾರಿಸಿದ್ದರೂ ಅಂಪಾಯರ್‌ ಅದನ್ನು ಗಮನಿಸದೆ “ಫೋರ್‌’ ನೀಡಿದ್ದಾರೆ ಎಂದು ಆರ್‌ಸಿಬಿ ಅಭಿಮಾನಿಗಳು ವಾದಿಸುತ್ತಿದ್ದಾರೆ. ಪಂದ್ಯದಲ್ಲಿ ಆರ್‌ಸಿಬಿ ಒಂದು ರನ್‌ ಸೋಲನುಭವಿಸಿದ್ದರಿಂದ ನಾನಾ ರೀತಿಯ ಪೋಸ್ಟ್‌ಗಳು ಗಮನ ಸೆಳೆಯುತ್ತಿವೆ.

ವೀಡಿಯೋ ಹಂಚಿಕೊಂಡಿರುವ ಆರ್‌ಸಿಬಿ ಫ್ಯಾನ್ಸ್‌, 16.5ನೇ ಓವರ್‌ನಲ್ಲಿ ವರುಣ್‌ ಚಕ್ರವರ್ತಿ ಎಸೆತಕ್ಕೆ ಪ್ರಭುದೇಸಾಯಿ ಸಿಕ್ಸ್‌ ಬಾರಿಸಿದ್ದಾರೆ. ಚೆಂಡು ಬೌಂಡರಿ ಗೆರೆಯನ್ನು ದಾಟಿದೆ. ಆದರೆ ಅಂಪಾಯರ್‌ ತೀರ್ಪು ನೀಡುವ ಮುನ್ನ, ಥರ್ಡ್‌ ಅಂಪಾಯರ್‌ ನೆರವೂ ಪಡೆಯದೆ ಅದನ್ನು ಫೋರ್‌ ಎಂದು ಪರಿಗಣಿಸಿದರು. ಹೀಗಾಗಿಯೇ ಆರ್‌ಸಿಬಿ ಗೆಲುವಿನಂಚಿನಲ್ಲಿ ಸೋತಿತು ಎಂದಿದ್ದಾರೆ. ಆದರೆ ಅಭಿಮಾನಿಗಳ ಈ ಪೋಸ್ಟ್‌ಗಳ ಬಗ್ಗೆ ಐಪಿಎಲ್‌ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next