Advertisement

ಪುರಾತನ ವಿಗ್ರಹ, ಪೂಜಾ ಸಾಮಗ್ರಿ ಪತ್ತೆ

07:20 AM Aug 13, 2017 | |

ಹೆಬ್ರಿ: ಕಾರ್ಕಳ ತಾಲೂಕಿನ ಮುನಿಯಾಲು ಚಟ್ಕಲ್‌ಪಾದೆ ಸಮೀಪದ  ಸಂಜೀವಿನಿ ಫಾರ್ಮ್ ಜಾಗದಲ್ಲಿ  ನಾಗಬನದ ಕೆಲಸಮಾಡುತ್ತಿರುವಾಗ ಮಣ್ಣಿನ ಅಡಿಯಲ್ಲಿ  ಪುರಾತನ ವಿಗ್ರಹಗಳು ಹಾಗೂ ಪೂಜಾ ಸಾಮಗ್ರಿಗಳು ಶುಕ್ರವಾರ ಪತ್ತೆಯಾಗಿವೆ.

Advertisement

ಜಾಗದಲ್ಲಿರುವ ನಾಗಬನದ ಜೀರ್ಣೋದ್ಧಾರ ಕಾಮಗಾರಿ  ಪ್ರಗತಿ ಯಲ್ಲಿದ್ದು ನಾಗಬನದ ಪಕ್ಕದಲ್ಲಿ ಸುಮಾರು ಎರಡೂವರೆ ಅಡಿ ಎತ್ತರದ ಶಿಲೆಕಲ್ಲನ್ನು ತೆಗೆದು ನಾಗಬನದ ಬಳಿ ಇಡುವಾಗ ಕಲ್ಲಿನ ಅಡಿಯಲ್ಲಿ ದೇವಿಯ ಮೂರ್ತಿ, ಗಣಪತಿ ಮೂರ್ತಿ, ಆರತಿ, ಶಂಖ, ಘಂಟಾಮಣಿ, ಕೂರ್ಮಾ ವತಾರದ ಮೂರ್ತಿ ಸಹಿತ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ಬೃಹತ್‌ ಕಲ್ಲಿನ ಮೇಲೆ ಶಿವಲಿಂಗ ಮತ್ತು ಸೂರ್ಯ ಚಂದ್ರರ ಚಿತ್ರವನ್ನು ಕೆತ್ತಲಾಗಿದೆ. ಅಜೆಕಾರು ಕಂದಾಯ ನಿರೀಕ್ಷಕ ಮಂಜುನಾಥ ನಾಯಕ್‌, ವರಂಗ ಗ್ರಾಮ ಲೆಕ್ಕಾಧಿಕಾರಿ ಹಿತೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂರು ತಿಂಗಳಿಂದ ಕೆಲಸ ಪ್ರಗತಿಯಲ್ಲಿದ್ದು ಇಂದು ಎತ್ತರದ‌ ಶಿಲೆಕಲ್ಲನ್ನು ತೆಗೆಯುವಾಗ ಮಣ್ಣಿನ ಅಡಿಯಲ್ಲಿ  ಪುರಾತನ  ವಿಗ್ರಹಗಳು ಹಾಗೂ ಪೂಜಾ ಸಾಮಗ್ರಿಗಳು ಸಿಕ್ಕಿವೆ ಎಂದು ಸಂಜೀವಿನಿ ಫಾರ್ಮ್ ಮತ್ತು ಡೇರಿ ಕಾರ್ಯದರ್ಶಿ ಸವಿತಾ ಆರ್‌. ಆಚಾರ್ಯ ಉದಯವಾಣಿಗೆ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next