ಘಟನೆಯಾ ವಿವರ : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಚುಂಚನಕಟ್ಟೆಗೆ ಕುಟುಂಬ ಸಮೇತ ವಾರಾಂತ್ಯದ ವಿಹಾರಕ್ಕೆ ಬಂದಿದ್ದ ಮೈಸೂರಿನ ಸಿಎಫ್ಟಿಆರ್‌ಐ ವಿಜ್ಞಾನಿಯೊಬ್ಬರು ಪತ್ನಿ, ಮಕ್ಕಳ ಮುಂದೆಯೇ ಇಲ್ಲಿನ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದರು.
Advertisement
ಮೈಸೂರಿನ ಸಿಎಫ್ಟಿಆರ್‌ಐನಲ್ಲಿ ಹಿರಿಯ ವಿಜ್ಞಾನಿಯಾಗಿದ್ದ ಹರ್ಯಾಣ ಮೂಲದ ಸೋಮಶೇಖರ್(40) ಪತ್ನಿ ಪ್ರತಿಮಾ ಮತ್ತು ಇಬ್ಬರು ಮಕ್ಕಳೊಂದಿಗೆ ಚುಂಚನಕಟ್ಟೆಗೆ ಬಂದು ನೀರಿಗಿಳಿದಿದ್ದರು. ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಇಡೀ ಕುಟುಂಬ ನೀರಿನ ಸೆಳೆತಕ್ಕೆ ಸಿಲುಕಿದೆ. ನದಿಯ ದಂಡೆಯಲ್ಲಿದ್ದ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಕೂಡಲೇ ಹಗ್ಗದ ಸಹಾಯದಿಂದ ಸೋಮಶೇಖರ್ ಪತ್ನಿ ಪ್ರತಿಮಾ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿದರು. ನೀರಿನ ಸೆಳೆತಕ್ಕೆ ಸಿಲುಕಿದ್ದ ಸೋಮಶೇಖರ್‌ರನ್ನು ಕಾಪಾಡಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ನೀರಿನಲ್ಲಿ ಕೊಚ್ಚಿ ಹೋಗಿರುವ ಸೋಮಶೇಖರ್ ಅವರಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು.