Advertisement
ಆಸ್ಟ್ರೇಲಿಯ ಏಕದಿನ ತಂಡದ ನಾಯಕ ಆ್ಯರನ್ ಫಿಂಚ್, ಸ್ಟೀವನ್ ಸ್ಮಿತ್, ಇಂಗ್ಲೆಂಡಿನ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಮೊದಲಾದವರೆಲ್ಲ ಈ ಯಾದಿಯಲ್ಲಿದ್ದಾರೆ. ಇವರ್ಯಾರಿಗೂ ಸೆ. 26ರ ಮೊದಲು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು. 2020ರ ಐಪಿಎಲ್ ಸೆ. 19ರಿಂದ ಆರಂಭವಾಗಲಿದೆ.
ಇಂಗ್ಲೆಂಡ್-ಆಸ್ಟ್ರೇಲಿಯ ನಡುವಿನ ಸರಣಿ ಸೆ. 4ರಿಂದ 16ರ ತನಕ ನಡೆಯಲಿದೆ. ಇದು ಮುಗಿದ ಕೂಡಲೇ ಯುಎಇಗೆ ಆಗಮಿಸಿದರೂ ಕ್ರಿಕೆಟಿಗರೆಲ್ಲ 6 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಹಾಗೆಯೇ 3 ಕೋವಿಡ್ ಟೆಸ್ಟ್‌ಗೆ ಒಳಗಾಗಬೇಕಿದೆ. ಈ ಮೂರೂ ಪರೀಕ್ಷೆಗಳ ವೇಳೆ ನೆಗೆಟಿವ್ ಫಲಿತಾಂಶ ಬಂದರಷ್ಟೇ ಕ್ರಿಕೆಟಿಗರು ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಬಹುದಾಗಿದೆ. ಈ ಕ್ವಾರಂಟೈನ್ ನಿಯಮವನ್ನು ಸಡಿಲಿಸಲು ಎಲ್ಲ ಫ್ರಾಂಚೈಸಿಗಳು ಮನವಿ ಮಾಡಿದರೂ ಬಿಸಿಸಿಐ ಇದನ್ನು ತಳ್ಳಿಹಾಕಿದೆ. ಮುಂಬೈಗೆ ನಷ್ಟವಿಲ್ಲ
ಆಸ್ಟ್ರೇಲಿಯ ಮತ್ತು ಇಂಗ್ಲೆಂಡಿನ ಒಟ್ಟು 29 ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡಲಿದ್ದಾರೆ. ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಉಳಿದ ಎಲ್ಲ ತಂಡಗಳಲ್ಲೂ ಇಲ್ಲಿನ ಸದಸ್ಯರನ್ನು ಕಾಣಬಹುದು. ಮುಂಬೈ ತಂಡದ ಕ್ರಿಸ್ ಲಿನ್ ಮತ್ತು ನಥನ್ ಕೋಲ್ಟರ್ ನೈಲ್ ಇಂಗ್ಲೆಂಡ್ ಪ್ರವಾಸಕ್ಕಾಗಿ ಆಸ್ಟ್ರೇಲಿಯ ತಂಡಕ್ಕೆ ಆಯ್ಕೆಯಾಗಿಲ್ಲ.
Related Articles
Advertisement