Advertisement

ಡಿಜಿಟಲ್‌ ಬ್ಯಾಂಕ್‌ ನಿಂದ ಆರ್ಥಿಕ ಭದ್ರತೆ

12:20 PM Nov 07, 2017 | Team Udayavani |

ಆಳಂದ: ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್‌ ಕರಣ ದಿಂದಾಗಿ ಅಭಿವೃದ್ಧಿ ಕಾಣುತ್ತಿದ್ದೇವೆ. ಅದರಲ್ಲೂ ಬ್ಯಾಂಕ್‌ ಡಿಜಿಟಲೀಕರಣ ದಿಂದ ಆರ್ಥಿಕ ಭದ್ರತೆ ಸಾಧ್ಯವಾಗಿದೆ ಎಂದು ಖಜೂರಿ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು.

Advertisement

ಪಟ್ಟಣದ ಮನೋರಮಾ ಕಲ್ಯಾಣ ಮಂಟಪದಲ್ಲಿ ಇಲ್ಲಿಯ ಎಸ್‌ಬಿಎಚ್‌ ಶಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಿಜಿಟಲ್‌
ಬ್ಯಾಂಕ್‌ ವ್ಯವಹಾರ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು. ನಮ್ಮ ಯಾವುದೇ ವ್ಯವಹಾರಗಳು ಹೆಚ್ಚಾಗಿ ಬ್ಯಾಂಕ್‌ ಅವಲಂಭಿಸಿವೆ. ಹೀಗಾಗಿ ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾ ಎಂಬ ಯೋಜನೆ ಜಾರಿಗೊಳಿಸಿದೆ. ಹೊಸ ತಂತ್ರಜ್ಞಾನದಿಂದ ನಮ್ಮಲ್ಲಿನ ದೈನಂದಿನ ಆರ್ಥಿಕ ಚಟುವಟಿಕೆಗಳು ವ್ಯವಹರಿಸಲು
ಮುಂದಾಗಬೇಕು. ಇದರಿಂದ ಸಮಯದ ಪಾರದರ್ಶಕತೆ ಕಾಪಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಬಿಎಚ್‌ ಶಾಖಾ ವ್ಯವಸ್ಥಾಪಕ ರಂಗನಾಥ ನೂಲಿಕರ ಮಾತನಾಡಿ, ಡಿಜಿಟಲ್‌ ವ್ಯವಸ್ಥೆಯಲ್ಲಿ ಪೋಸ್ಟ್‌ ಮತ್ತು ಎಟಿಎಂ ಮತ್ತಿತರ ಸೇವೆಗಳಿವೆ. ಪ್ರತಿಯೊಬ್ಬರು ಮೊಬೈಲ್‌ ಬಳಕೆಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಹೇಳಿದರು. ಎಸ್‌ಬಿಐ ಜಿಲ್ಲಾ ವ್ಯವಸ್ಥಾಪಕ ಸಂತೋಷ ಬೆಂಗೇರಿ ಮಾತನಾಡಿ, ಜೀವನದಲ್ಲಿ
ಬದಲಾವಣೆ ಮುಖ್ಯ. ಅದರೊಂದಿಗೆ ಆಧುನಿಕ ವ್ಯವಹಾರದಲ್ಲಿಯೂ ಡಿಜಿಟಲ್‌ ಪಾತ್ರ ಅತಿ ಮುಖ್ಯವಾಗಿದೆ ಎಂದು ಹೇಳಿದರು.

ಉದ್ಯಮಿ ಜೊದಾರಾಮ ಅಡ್ವಾನಿ, ಮುಖಂಡರಾದ ಜಿ.ಎನ್‌. ಮುತ್ತುರಾಜ, ರೇವಣಪ್ಪ ನಾಗೂರೆ, ಅಪ್ಪಾಸಾಬ ತೀಥೆì,
ಸತೀಶ ಕಟಂಬಲೆ, ನರಸಪ್ಪ ಬಿರಾದಾರ, ತುಕಾರಾಮ ಹೆಬಳಿ, ನಿರಂಜನ ಶಹಾ, ಬ್ಯಾಂಕ್‌ ಡೆಪ್ಯೂಟಿ ವ್ಯವಸ್ಥಾಪಕ ಚೇತನಕುಮಾರ ಕೊಳಿ, ಸಹಾಯಕ ವ್ಯವಸ್ಥಾಪಕ ಅನಸೂಲ ಚವ್ಹಾಣ, ಮಹಾದೇವಮ್ಮ ಹಾಗೂ ಬ್ಯಾಂಕ್‌ ಅಧಿಕಾರಿಗಳು ಭಾಗವಹಿಸಿದ್ದರು. 

ನ್ಯಾಯವಾದಿ ಪಿ.ಎನ್‌. ಶಹಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧನಂಜಯ ಡೊಲೆ ನಿರೂಪಿಸಿದರು. ನಂತರ ಡಿಜಿಟಲ್‌ ವ್ಯವಹಾರ ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ಪರದೆ ಮೂಲಕ ಗ್ರಾಹಕರಲ್ಲಿ ಅರಿವು ಮೂಡಿಸಲಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next