Advertisement

Financial Policy: ಭದ್ರತೆ ಇಲ್ಲದ ಕೃಷಿ ಸಾಲ ಮಿತಿ 2 ಲಕ್ಷ ರೂ.ಗೆ ಏರಿಕೆ

02:49 AM Dec 07, 2024 | |

ಮುಂಬಯಿ: ರೈತರಿಗೆ ಆರ್‌ಬಿಐ ಸಿಹಿ ಸುದ್ದಿ ನೀಡಿದೆ. ಯಾವುದೇ ಭದ್ರತೆ (ಮೇಲಾಧಾರ) ಇಲ್ಲದೇ ನೀಡಲಾಗುವ ಕೃಷಿ ಸಾಲದ ಮಿತಿಯನ್ನು ಈಗ ಇರುವ 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವುದಾಗಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

Advertisement

ಆರ್‌ಬಿಐನ 3 ದಿನಗಳ ವಿತ್ತೀಯ ನೀತಿ ಪರಿಶೀಲನ ಸಭೆ ಬಳಿಕ ಅವರು ಮಾತನಾಡಿದರು. ಹಾಲಿ ವಿತ್ತ ವರ್ಷದ ಜಿಡಿಪಿ ಪ್ರಗತಿ ದರದ ನಿರೀಕ್ಷೆಯನ್ನು ಈ ಹಿಂದಿನ ಶೇ.7ರಿಂದ ಶೇ.6.6ಕ್ಕಿಳಿಸಲಾಗಿದೆ.

ಬಡ್ಡಿ ದರ ಬದಲಿಲ್ಲ:
ಸತತ 11ನೇ ಬಾರಿಗೆ ಬಡ್ಡಿ ದರವನ್ನು ಯಥಾಸ್ಥಿತಿ ಯಲ್ಲೇ(ಶೇ.6.5) ಇರಿಸಲು ಆರ್‌ಬಿಐ ತೀರ್ಮಾನಿಸಿದೆ.

ಡಾಲರ್‌ ರಹಿತ ವ್ಯಾಪಾರವಿಲ್ಲ: ದಾಸ್‌ ಸ್ಪಷ್ಟನೆ
ದೇಶದ ವ್ಯಾಪಾರ ಕ್ಷೇತ್ರದಲ್ಲಿ ಅಮೆರಿ ಕದ ಡಾಲರನ್ನು ಹೊರಗಿರಿಸಿ ವಹಿ ವಾಟು ನಡೆಸುವ ಇರಾದೆಯನ್ನು ಭಾರತ ಹೊಂದಿಲ್ಲ. ಆದರೆ ದೇಶದ ವ್ಯಾಪಾರ ಕ್ಷೇತ್ರಕ್ಕೆ ಉಂಟಾಗುವ ಇತರ ಆತಂಕಗಳಿಂದ ಮುಕ್ತಗೊಳಿಸಲು ಆದ್ಯತೆ ನೀಡಲಾಗುತ್ತದೆ ಎಂದು ಆರ್‌ಬಿಐ ಗವರ್ನರ್‌ ಹೇಳಿದ್ದಾರೆ. ಬ್ರಿಕ್ಸ್‌ ರಾಷ್ಟ್ರಗಳು ಡಾಲರ್‌ಗೆ ಪರ್ಯಾಯ ಕರೆನ್ಸಿ ಹುಡುಕಿದರೆ, ಶೇ.100 ತೆರಿಗೆ ವಿಧಿಸಲಾಗುತ್ತದೆ ಎಂಬ ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್‌ ಬೆದರಿಕೆ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next