Advertisement

ಹಂಪಿ ಗೈಡ್‌ಗಳಿಗೆ ಆರ್ಥಿಕ ನೆರವು

05:04 PM Sep 05, 2021 | Team Udayavani |

ಹೊಸಪೇಟೆ: ಮಹಾಮಾರಿ ಕೋವಿಡ್ ಒಂದು ಮತ್ತು ಎರಡನೇ ಅಲೆ ಹೊಡೆತಕ್ಕೆ ಸಿಕ್ಕಿ ಸಂಕಷ್ಟ ಎದುರಿಸುತ್ತಿರುವ ಹಂಪಿ ಗೈಡ್‌ಗಳಿಗೆ ಇದೀಗ
ಸರ್ಕಾರ ಆರ್ಥಿಕ ನೆರವು ನೀಡಲು ಮುಂದಾಗಿದೆ.

Advertisement

ಸರ್ಕಾರ ಹಂಪಿ ಪ್ರವಾಸಿ ಮಾರ್ಗದರ್ಶಿಗಳಖಾತೆಗೆ ತಲಾ 5 ಸಾವಿರ ರೂ. ಗಳ ಸಹಾಯಧನ ಅವರ ಖಾತೆಗೆ ನೇರವಾಗಿ ವರ್ಗಾವಣೆ
ಮಾಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಿದೆ.

ಪ್ರವಾಸೋದ್ಯಮ ಇಲಾಖೆಯಿಂದ ಹಂಪಿಯಲ್ಲಿ ಮಾನ್ಯತೆ ಪಡೆದ ನೂರಕ್ಕೂ ಹೆಚ್ಚು ಜನರ ಖಾತೆಗೆ ಈಗಾಗಲೇ ಹಣ ಜಮೆಯಾಗಿದೆ.
ಗೈಡ್‌ ವೃತ್ತಿಯನ್ನೇ ನಂಬಿ ಜೀವನ ನಡೆಸುವ ಪ್ರವಾಸಿ ಮಾರ್ಗದರ್ಶಿಗಳಿಗೆ ಕೊಂಚ ಸಹಾಯವಾದಂತಾಗಿದೆ. ಕುಟುಂಬ ನಿರ್ವಹಣೆಗೆ
ಅನುಕೂಲವಾಗಿದೆ. ಹಂಪಿಯಲ್ಲಿ ಹವ್ಯಾಸಿ ಮಾರ್ಗದರ್ಶಕರಾಗಿ 40 ಜನ ಗೈಡ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕಳೆದ
ಎರಡು ಬಾರಿಯೂ ಲಾಕ್‌ಡೌನ್‌ ಪರಿಹಾರ ದೊರೆತಿಲ್ಲ. ಕೊರೊನಾ ಎರಡನೇ ಅಲೆಯಿಂದಾಗಿ ಇಡೀ ಪ್ರವಾಸೋದ್ಯಮ ಕ್ಷೇತ್ರವೇ ಸ್ತಬ್ಧವಾಗಿದ್ದ
ಸಂದರ್ಭದಲ್ಲಿ ಪ್ರವಾಸಿ ಮಾರ್ಗದರ್ಶಿಗಳು ಕೆಲಸವಿಲ್ಲದೆ ಅತಂತ್ರ ಸ್ಥಿತಿ ಎದುರಿಸಿದ್ದರು.

ಇದನ್ನೂ ಓದಿ:ಪಾಕಿಸ್ಥಾನದ ಕ್ವೆಟ್ಟಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಮೂವರು ಸಾವು, 20 ಮಂದಿಗೆ ಗಾಯ

ಕುಟುಂಬಗಳ ನಿರ್ವಹಣೆಗಾಗಿ ಗ್ರಾಪಂನಿಂದ ನರೇಗಾ ಯೋಜನೆಯಡಿ ನೀಡಲಾದ ಕೆಲಸಕ್ಕೆ ತೆರಳಿ ಕುಟುಂಬದ ಜವಾಬ್ದಾರಿಯನ್ನು ನೀಗಿಸಿದ್ದರು. ಇಲ್ಲಿನ ಸ್ಥಳೀಯ ಹೋಟೆಲ್‌, ಕರಕುಶಲ ವ್ಯಾಪಾರಿಗಳ ಸ್ಥಿತಿಯೂ ಇದಕ್ಕೆ ಹೊರತಾಗಿರಲಿಲ್ಲ. ಸದ್ಯ ಪ್ರಾವಾಸೋದ್ಯಮ ಕ್ಷೇತ್ರ ಚೇತರಿಕೆ ಕಂಡಿದ್ದು, ವ್ಯಾಪಾರ ವಹಿವಾಟು ಆರಂಭವಾಗಿದೆ.

Advertisement

ಸುಧಾ ಮೂರ್ತಿಯವರಿಂದಲೂ ದೊರಕಿತ್ತು ನೆರವು:
ಕೋವಿಡ್ಎರಡನೇ ಅಲೆಯಿಂದ ಕಂಗಾಲಾಗಿದ್ದ ನೂರು ಜನ ಗೈಡ್‌ಗಳಿಗೆ ಇನ್ಫೋಸಿಸ್‌ ಫೌಂಡೇಷನ್‌ನಿಂದ ಸುಧಾಮೂರ್ತಿಯವರು ಮೇನಲ್ಲಿ
ತಲಾ 10 ಸಾವಿರ ರೂ. ನೀಡುವ ಮೂಲಕ ಸ್ಪಂದಿಸಿದ್ದರು. ಇದು ಲಾಕ್‌ಡೌನ್‌ ದಿನಗಳಲ್ಲಿ ಗೈಡ್‌ ಗಳಿಗೆ ತುಂಬ ಆಸರೆಯಾಗಿತ್ತು. ಸದ್ಯ ಕೋವಿಡ್ ಎರಡನೇ ಅಲೆ ತಗ್ಗಿದ್ದು, ಮೂರನೇ ಅಲೆಯ ಭೀತಿ ನಡುವೆಯೂ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿವೆ. ಮೂರನೇ ಅಲೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ ಒಳಪಡುವ ಸ್ಮಾರಕಗಳ ವೀಕ್ಷಣೆಗೆ ಶನಿವಾರ ಮತ್ತು ಭಾನುವಾರ ನಿರ್ಬಂಧ ಹೇರಲಾಗಿದೆ.

ಇದರ ಹೊರತಾಗಿಯೂ ಬೇರೆ ದಿನಗಳಲ್ಲಿ ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ,
ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ಹೇರಿರುವ ವಿಷಯ ತಿಳಿಯದ ಬಹುತೇಕ ಪ್ರವಾಸಿಗರು ಕಮಲಾಪುರದವರೆಗೆ ಬಂದು ಹಿಂದಿರುಗುತ್ತಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸವಿಲ್ಲದೆಕುಟುಂಬ ನಿರ್ವಹಣೆಗೆ ತುಂಬಾ ಸಮಸ್ಯೆ ಎದುರಿಸಬೇಕಾಯಿತು. ಸರ್ಕಾರ ಆರ್ಥಿಕ ನೆರವು ನೀಡಿರುವುದರಿಂದ ಅನುಕೂಲವಾಗಿದೆ.
-ಗೋಪಾಲ ಹಂಪಿ
ಪ್ರವಾಸಿ ಮಾರ್ಗದರ್ಶಿ, ಹಂಪಿ

152 ಪ್ರವಾಸಿ ಮಾರ್ಗದರ್ಶಿಗಳ ವಿವರವನ್ನು ಇಲಾಖೆಗೆಕಳಿಸಲಾಗಿತ್ತು. ಗೈಡ್‌ಗಳ ಖಾತೆಗೆ ಹಣ ಜಮೆಯಾಗುತ್ತಿದೆ.
-ತಿಪ್ಪೇಸ್ವಾಮಿ, ಪ್ರವಾಸೋದ್ಯಮ
ಇಲಾಖೆ, ಡಿಡಿ, ಹಂಪಿ

-ಪಿ.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next