Advertisement

ಅಂಗವಿಕಲ ಕ್ರೀಡಾಪಟುಗೆ ಆರ್ಥಿಕ ನೆರವು

12:02 PM Jan 28, 2018 | Team Udayavani |

ಕೆ.ಆರ್‌.ನಗರ: ಪ್ರತಿಭಾವಂತ ಕ್ರೀಡಾಪಟುಗಳು ಮತ್ತು ಅಂಗವಿಕಲ ಕ್ರೀಡಾಳುಗಳಿಗೆ ಸರ್ಕಾರ ಅಗತ್ಯ ತರಬೇತಿ ಮತ್ತು ಆರ್ಥಿಕ ಸಹಕಾರ ನೀಡಲು ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಪಟ್ಟಣದ ಶಹೀದ್‌ ಟಿಪ್ಪು ಸುಲ್ತಾನ್‌ ಟ್ರಸ್ಟ್‌ ಸಮಿತಿ ಅಧ್ಯಕ್ಷ ಸೈಯದ್‌ಜಾಬೀರ್‌ ಹೇಳಿದರು.

Advertisement

ಉತ್ತರ ಮತ್ತು ಪಶ್ಚಿಮ ಏಷ್ಯನ್‌ ಭಾಗದ ರಾಷ್ಟ್ರಗಳ ಒಕ್ಕೂಟದ ವತಿಯಿಂದ ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ನಡೆಯಲಿರುವ ಅಂಗವಿಕಲರ ಕ್ರೀಡಾ ಚಾಂಪಿಯನ್‌ ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ತಾಲೂಕಿನ ಮಾರ್ಚಹಳ್ಳಿ ಗ್ರಾಮದ ಅಂಗವಿಕಲ ಕ್ರೀಡಾಪಟು ಚೌಡಯ್ಯ ಅವರಿಗೆ ಟ್ರಸ್ಟ್‌ ವತಿಯಿಂದ ಆರ್ಥಿಕ ಸಹಕಾರ ನೀಡಿ ಮಾತನಾಡಿದರು.

ಆರ್ಥಿಕ ಸಂಕಷ್ಟದಲ್ಲಿರುವ ಚೌಡಯ್ಯನವರಂತಹ ಕ್ರೀಡಾ ಪ್ರತಿಭೆಗಳಿಗೆ ಸರ್ಕಾರದ ಜತೆಗೆ ಸಂಘ ಸಂಸ್ಥೆಗಳು ಉದಾರವಾಗಿ ದಾನ ಮಾಡಬೇಕು. ಮುಂದಿನ ದಿನಗಳಲ್ಲಿ ಚೌಡಯ್ಯರ ಸಹಕಾರಕ್ಕೆ ನಾವು ಸದಾ ಸಿದ್ಧರಾಗಿದ್ದು ಸಾಧ್ಯವಾದಷ್ಟು ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. ಕಾರ್ಯದರ್ಶಿ ಸೈಯದ್‌ವಾಜೀದ್‌, ಸದಸ್ಯರಾದ ಅಬ್ದುಲ್‌ಖಾಹರ್‌, ಅನುಷ್‌ ಅಹನದ್‌ಖಾನ್‌, ರಹಮತ್‌, ಮಸೀದಿ ಗುರುಗಳಾದ ಅಮೀನ್‌ ಮೊಹನೀಷಾ ಇದ್ದರು. 

ವಾಲ್ಮೀಕಿ ನಾಯಕರ ಸಂಘ ಸಹಕಾರ: ತಾಲೂಕು ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಅಂಗವಿಕಲ ಕ್ರೀಡಾಪಟು ಡಿ.ಚೌಡಯ್ಯ ಅವರಿಗೆ ಆರ್ಥಿಕ ಸಹಕಾರ ನೀಡಿ ಬೀಳ್ಕೊಡಲಾಯಿತು. ಪಟ್ಟಣದ ವಾಲ್ಮೀಕಿ ನಾಯಕರ ಸಮುದಾಯ ಭವನದಲ್ಲಿ ನಡೆದ ಸರಳ ಸಮಾರಂಭಗಲ್ಲಿ ಸಂಘದ ಖಜಾಂಚಿ ಮಹದೇವನಾಯಕ, ಡಿ.ಚೌಡಯ್ಯರಿಗೆ ಸಂಘದ ವತಿಯಿಂದ 10 ಸಾವಿರ ರೂ., ಹಣ ನೀಡಿದರು. ಸಂಘದ ನಿರ್ದೇಶಕರಾದ ನಾಗರಾಜು, ಮಹದೇವ, ಸುರೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next