ಮುಂಬಯಿ: ಮುಂಬಯಿ ಮಹಾ ನಗರವನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡು ನಿರಂತರವಾಗಿ ನಿಸ್ವಾರ್ಥ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಷ್ಠಿತ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ಎಪ್ರಿಲ್‌ನಲ್ಲಿ ಎರಡು ಮಾಸಿಕ ಯೋಜನೆಗಳನ್ನು ಕೈಗೆತ್ತಿಕೊಂಡಿತ್ತು.
ಉಡುಪಿಯ ಕೊರಂಗ್ರಪಾಡಿ ನಿವಾಸಿ ಶೋಭಾ ಶೆಟ್ಟಿಯವರು ಕಳೆದ ಎರಡು ವರ್ಷಗಳಿಂದ ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಸರ್ಜರಿ ಯಶಸ್ವಿಯಾಗಿ ನಡೆದಿತ್ತು. ಈಗ ರೇಡಿಯೇಶನ್ ಥೆರಪಿ ನಡೆಯುತ್ತಿದ್ದು ಸುಮಾರು ಹದಿನೆಂಟು ಲಸಿಕೆಯ ಅಗತ್ಯವಿದ್ದು ಇನ್ನೂ ಕೆಲವು ಲಸಿಕೆಗಳು ಬಾಕಿಯಿವೆ. ಒಂದು ಲಸಿಕೆಯ ಬೆಲೆ 18,000 ರೂ.ಗಳಾಗಿದ್ದು, ಶೋಭಾ ಶೆಟ್ಟಿಯವರ ಪರಿವಾರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಪತಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿ¨ªಾರೆ. ಇಬ್ಬರು ಪುಟ್ಟ ಮಕ್ಕಳ ವಿದ್ಯಾಭ್ಯಾಸದ ಹೊರೆಯ ಜತೆ ಅನಿರೀಕ್ಷಿತವಾಗಿ ಬಂದೆರಗಿದ ಈ ಕ್ಯಾನ್ಸರ್ ಎಂಬ ಮಹಾಮಾರಿಯಿಂದಾಗಿ ಕುಟುಂಬದ ಆರ್ಥಿಕ
ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದೆ.
ಅಶಕ್ತರ ಸೇವೆಯೇ ಪರಮೋಚ್ಚ ಧರ್ಮಎನ್ನುವ ಶಿವಾಯ ಫೌಂಡೇಶನ್ ನಲ್ವತ್ತು ಸಾವಿರ ರೂ. ಗಳ ಮೊತ್ತದ ಚೆಕ್ಕನ್ನು ಶೋಭಾ ಶೆಟ್ಟಿಯವರಿಗೆ ಹಸ್ತಾಂತರಿಸಿತು. ಈ ಸಂದರ್ಭದಲ್ಲಿ ಪುಣೆಯ ಉದ್ಯಮಿ ಶಿವಾಯ ಫೌಂಡೇಶನಿನ ಪೋಷಕರಾದ ಸಂದೇಶ್ ಶೆಟ್ಟಿ ಇನ್ನಂಜೆ, ಶಿವಾಯ ತಂಡದ ವೈಧ್ಯಕೀಯ ಸಲಹೆಗಾರ್ತಿ ಡಾ| ಸ್ವರ್ಣಲತಾ ಶೆಟ್ಟಿ, ಸದಸ್ಯರಾದ ಸೋನಿಯಾ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ಪಲಿಮಾರು ಉಪಸ್ಥಿತರಿದ್ದರು.
ಎಪ್ರಿಲ್‌ನ ಎರಡನೇ ಯೋಜನೆಯಾಗಿ, ಕ್ಯಾಂಟೀನ್ ಉದ್ಯೋಗಿಯಾಗಿದ್ದ ಮಲಾಡ್ ನಿವಾಸಿ ರಾಜೇಂದ್ರ ಬೆಲ್ಚಡರವರು ಕಳೆದ 12 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದಿದ್ದು, ಔಷೋಧಾಪಚಾರ, ಮನೆ ನಿರ್ವಹಣೆ ಹಾಗೂ ಮಗನ ವಿದ್ಯಾಭ್ಯಾಸ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದೀಗ ಮಗನ ವಿದ್ಯಾಭ್ಯಾಸ ಮುಂದುವರಿಸಲು ಸಮಸ್ಯೆಯಲ್ಲಿದ್ದ ರಾಜೇಂದ್ರ ಬೆಲ್ಚಡರವರ ಮನೆಗೆ ಭೇಟಿ ನೀಡಿದ ಶಿವಾಯ ಫೌಂಡೇಶನ್ ತಂಡ ಅವರ ಪುತ್ರನ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲೆಂಬ ಉದ್ದೇಶದಿಂದ 20,000 ರೂ. ಗಳ ಚೆಕ್‌ನ್ನು ಹಸ್ತಾಂತರಿಸಿತು. ಈ ಸಂದರ್ಭದಲ್ಲಿ ಶಿವಾಯ ಫೌಂಡೇಶನ್ ಸದಸ್ಯರಾದ ಪ್ರಶಾಂತ್ ಪಂಜ, ವರ್ಣಿತ್ ಶೆಟ್ಟಿ, ವಿನೋದ್ ದೇವಾಡಿಗ, ದಿವಾಕರ್ ಶೆಟ್ಟಿ, ದೀಪಾ ಪೂಜಾರಿ, ರಾಜೇಶ್ ಶೆಟ್ಟಿ ಕಟಪಾಡಿ ಹಾಗೂ ಚಂದ್ರ ದೇವಾಡಿಗ ಅವರು ಉಪಸ್ಥಿತರಿದ್ದರು.