Advertisement
ಗಲ್ಫ್ ನಲ್ಲಿ ತಲೆಮರೆಸಿರುವ ಅರಾಫತ್ ಅಲಿ ಎಂಬಾತನ ನಿರ್ದೇಶನದ ಮೇರೆಗೆ ಶಾರೀಕ್ ಮತ್ತು ಆತನ ಸಹ ಚರರು ಕೆಲಸ ಮಾಡುತ್ತಿದ್ದರು. ಇವರಿಗೆ ಆತನೇ ಹಣ ಕಾಸು ನೆರವು ನೀಡುತ್ತಿದ್ದ. ಈತ ಐಎಸ್ ಪ್ರೇರಿತ ಅಲ್ ಹಿಂದ್‌ನ ಅಬ್ದುಲ್ ಮತೀನ್ ತಾಹಾ ಜತೆಗೂ ನಿಕಟ ಸಂಪರ್ಕದಲ್ಲಿ ದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕುಕ್ಕರ್ ಬಾಂಬ್ ಸ್ಫೋಟ ಸಂಬಂಧ ಕೇಂದ್ರದ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಅಧಿಕಾರಿಗಳು ಗೌಪ್ಯವಾಗಿ ತನಿಖೆಗಿಳಿದಿದ್ದು, ಆರೋಪಿ ಶಾರೀಕ್ ಸಂಪರ್ಕದಲ್ಲಿರುವ ಒಬ್ಬೊಬ್ಬರನ್ನೇ ಗುರುತಿಸಿ ಕೂಲಂಕಷವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
Related Articles
Advertisement
ಕಾಯುತ್ತಿವೆ 7 ತನಿಖಾ ತಂಡ!ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ವಿಶೇಷವೆಂದರೆ ಈತನ ಚೇತರಿಕೆಗಾಗಿ ಏಳು ತನಿಖಾ ತಂಡಗಳು ಕಾಯುತ್ತಿವೆ. ಕೇಂದ್ರ ಗೃಹ ಸಚಿವಾಲಯವೂ ಸೋಮ ವಾರ ಶಾರೀಕ್ ಕುರಿತು ವರದಿ ಪಡೆದಿದೆ. ಮತ್ತೂಂದೆಡೆ ಎನ್‌ಐಎ ತಂಡವು ಶಾರೀಕ್ ಸಂಪರ್ಕದಲ್ಲಿದ್ದ ಶಂಕಿತ ಉಗ್ರರಿಗೆ ಶೋಧ ಮುಂದು ವರಿಸಿದ್ದು, ಕೆಲವು ಮಹತ್ವದ ದಾಖಲೆಗಳು ಸಿಕ್ಕಿವೆ. ಪಿತೂರಿಗಾರನ ಬಗ್ಗೆಯೂ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಮಂಗಳೂರು, ಮೈಸೂರು, ಶಿವಮೊಗ್ಗ, ತಮಿಳು ನಾಡಿನ ಕೊಯಮತ್ತೂರು, ಕೇರಳಕ್ಕೆ ತೆರಳಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವಲ್ಲಿ ತೊಡಗಿದ್ದಾರೆ. ವಾಟ್ಸ್‌ಆ್ಯಪ್ ನಲ್ಲಿ ಆದಿಯೋಗಿ
ಶಾರೀಕ್ ವ್ಯಾಟ್ಸ್‌ಆ್ಯಪ್ ಡಿಪಿಯಲ್ಲಿ ಆದಿಯೋಗಿ ಚಿತ್ರ ಹಾಕಿದ್ದ. ಮೈಸೂರಿನಲ್ಲಿ ಮೊಬೈಲ್ ತರಬೇತಿಗೆ ಹೋದಾಗಲೂ ಪ್ರೇಮ್‌ರಾಜ್ ಎಂದಿದ್ದ. ಮಂಗಳೂರಿಗೆ ಬಂದಾಗಲೂ ಆತ ಕೇಸರಿ ಶಾಲು ಹೊಂದಿದ್ದ. ಈ ಮೂಲಕ ದಾರಿ ತಪ್ಪಿಸುವ ಮತ್ತು ಸ್ಫೋಟ ವೇಳೆ ಸಾವಿಗೀಡಾದರೂ ಹಿಂದೂ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸಿದ್ದ ಎಂದು ಮೂಲಗಳು ತಿಳಿಸಿವೆ. ಇಂದು ಗೃಹ ಸಚಿವರು,
ಡಿಜಿಪಿ ಮಂಗಳೂರಿಗೆ
ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಡಿಜಿಪಿ ಪ್ರವೀಣ್ ಸೂದ್ ಬುಧವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ಗೃಹಸಚಿವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಸ್ಪತ್ರೆ, ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.